ಭಾರತೀಯ ಪರಂಪರೆ, ಸಂಸ್ಕೃತಿ ತ್ಯಜಿಸದಿರಿ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ನೂಲ ಹುಣ್ಣಿಮೆಯ ಪ್ರಯುಕ್ತ ನೃಪತುಂಗ ಬೆಚ್ಚದ ಬಳಿಯ ಪಿರಾಮಿಡ್ ಧ್ಯಾನ ಮಂದಿರದಲ್ಲಿ ಶನಿವಾರ ಧ್ಯಾನ ಶಿಬಿರ ಹಾಗೂ ಸತ್ಸಂಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸತ್ಸಂಗ ನಡೆಸಿಕೊಟ್ಟ ಡಾ. ಎ. ಸಿ. ವಾಲಿ ಗುರೂಜಿ ಮಾತನಾಡಿ, ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ನಾವು ಎಂದಿಗೂ ಕೈ ಬಿಡಬಾರದು. ದೇಶದ ಜನ ಇಂದು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ವಾಲುತ್ತಿದ್ದಾರೆ. ಆದರೆ, ಪಾಶ್ಚಿಮಾತ್ಯರು ಭಾರತೀಯ ಸಂಸ್ಕೃತಿಯನ್ನು ಮೆಚ್ಚಿ ಬರುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ನಾವು ನಮ್ಮತನವನ್ನು ಎತ್ತಿ ಹಿಡಿಯಬೇಕು ಎಂದರು.

ಧ್ಯಾನದಿಂದ ಮನುಷ್ಯ ಎಲ್ಲವನ್ನು ಸಾಧಿಸಲು ಸಾಧ್ಯ. ಎಲ್ಲ ಧರ್ಮವು ಧ್ಯಾನದ ಮಹತ್ವವನ್ನು ಸಾರಿವೆ. ಬಸವಣ್ಣ, ಶಿಶುನಾಳ ಶರೀಫ್, ಬುದ್ಧ, ಮಹಾವೀರ, ಶಂಕರಾಚಾರ್ಯರು ಧ್ಯಾನದ ಬಗ್ಗೆ ವಿಸ್ತಾರವಾಗಿ ತಿಳಿಸಿದ್ದಾರೆ. ಪ್ರತಿಯೊಬ್ಬರು ಸಸ್ಯಹಾರಿಗಳಾಗಿ ಧ್ಯಾನಿಗಳಾಗಿ ಎಂದು ಕರೆಕೊಟ್ಟರು.

ಪಿರಾಮಿಡ್ ಧ್ಯಾನಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ್ ಅಧ್ಯಕ್ಷತೆ ವಹಿಸಿದ್ದರು. ಧ್ಯಾನ ಶಿಬಿರವನ್ನು ವಿಶಾಲಾಕ್ಷಿ ಆಕಳವಾಡಿ ನಡೆಸಿಕೊಟ್ಟರು.

ಟ್ರಸ್ಟಿಗಳಾದ ನೀಲಕಂಠ ಆಕಳವಾಡಿ, ಬಸವರಾಜ ಹೊಸಮನಿ, ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net