ಗುರುಕುಲ ಪ್ರಾರಂಭಿಸಲು ದಾನಿಗಳಿಂದ ಸಹಕಾರ

ಬೇಲುರಿನ ಶೃಂಗೇರಿ ಮಠದ ಶ್ರೀ ಭಾರತಿ ತೀರ್ಥರ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ರಾಹ್ಮಣ ಮಹಾಸಭಾದ ವಾರ್ಷಿಕ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು. ಸಿ.ಆರ್.ವಿಜಯ ಕೇಶವ, ತೊ.ಚ.ಅನಂತ ಸುಬ್ಬರಾಯ, ನರಸಿಂಹಮೂರ್ತಿ, ಸತೀಶ್,  ರಘುನಾಥ್, ಶ್ರೀವತ್ಸ, ರಾಘವೇಂದ್ರ ಹೊಳ್ಳ, ನಾರಾಯಣರಾವ್ ಇದ್ದರು.
ಬೇಲುರಿನ ಶೃಂಗೇರಿ ಮಠದ ಶ್ರೀ ಭಾರತಿ ತೀರ್ಥರ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ರಾಹ್ಮಣ ಮಹಾಸಭಾದ ವಾರ್ಷಿಕ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು. ಸಿ.ಆರ್.ವಿಜಯ ಕೇಶವ, ತೊ.ಚ.ಅನಂತ ಸುಬ್ಬರಾಯ, ನರಸಿಂಹಮೂರ್ತಿ, ಸತೀಶ್, ರಘುನಾಥ್, ಶ್ರೀವತ್ಸ, ರಾಘವೇಂದ್ರ ಹೊಳ್ಳ, ನಾರಾಯಣರಾವ್ ಇದ್ದರು.
Published on

ಬೇಲೂರು: ಐತಿಹಾಸಿಕ ಹಿನ್ನೆಲೆ ಇರುವ ಬೇಲೂರಿನಲ್ಲಿ ವೇದ ಅಧ್ಯಯನದ ಜತೆಗೆ ಗುಣಮಟ್ಟದ ಶಿಕ್ಷಣ ನೀಡಲು ಗುರುಕುಲ ಪ್ರಾರಂಭಿಸಬೇಕೆನ್ನುವ ಸಂಕಲ್ಪ ಮಾಡಿದ್ದು, ಹಲವಾರು ದಾನಿಗಳು ಮುಂದೆ ಬಂದಿದ್ದಾರೆ ಎಂದು ಬ್ರಾಹ್ಮಣ ಮಹಾಸಭಾ ತಾಲೂಕು ಅಧ್ಯಕ್ಷ ಸಿ.ಆರ್.ವಿಜಯ ಕೇಶವ ಹೇಳಿದರು.

ಪಟ್ಟಣದ ಶೃಂಗೇರಿ ಮಠದ ಶ್ರೀ ಭಾರತಿ ತೀರ್ಥರ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಬ್ರಾಹ್ಮಣ ಮಹಾಸಭಾದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ವಿಪ್ರ ಸಮುದಾಯದ ಮಕ್ಕಳಿಗೆ ವೇದ ಅಧ್ಯಯನದ ಜತೆಗೆ ಗುಣಮಟ್ಟದ ಶಿಕ್ಷಣ ನೀಡಲು ಉಚಿತ ಗುರುಕುಲ ಪ್ರಾರಂಭಿಸಲು ಈಗಾಗಲೇ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚಿಕ್ಕ ಗಿಡವನ್ನು ನೀರೆರೆದು ಬೆಳೆಸಲು ಸಾಕಷ್ಟು ಜನರು ಕೈಜೋಡಿಸಲು ಮುಂದೆ ಬಂದಿದ್ದಾರೆ. ಪ್ರತಿ ವರ್ಷ ಮಕ್ಕಳ ಶೈಕ್ಷಣಿಕ ಅನುಕೂಲಕ್ಕೆ ವಿದ್ಯಾ ನಿಧಿಯನ್ನು ಈ ವರ್ಷದಿಂದಲೇ ಪ್ರಾರಂಭಿಸಲಾಗುತ್ತಿದೆ ಎಂದರು.

ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ತೊ.ಚ.ಅನಂತ ಸುಬ್ಬರಾಯ ಮಾತನಾಡಿ, ತಾಲೂಕಿನ ತ್ರಿಮತಸ್ಥ ಬ್ರಾಹ್ಮಣರು ಒಂದಡೆ ಸೇರುವ ಅವಕಾಶ ದೊರೆತಂತೆ ಕಾಣುತ್ತಿದೆ. ವಿಜಯಕೇಶವ, ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಉಳಿತಾಯದ ಲೆಕ್ಕಪತ್ರ ತೋರಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಹಾರನಹಳ್ಳಿ ಅಶೋಕ್ ಅವರನ್ನು ರಾಜ್ಯ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರ ಆಯ್ಕೆಗೆ ಸಹಕರಿಸಿದ್ದೆವು. ಅವರೂ ಸಹ ಕೋಟ್ಯಂತರ ರೂ. ಉಳಿಸಿ ಅಭಿವೃದ್ಧಿಗೆ ಮುಂದಾಗಿದ್ದಾರೆ. 22 ವರ್ಷದ ಹಿಂದೆ ಏಳೆಂಟು ಜನ ಸೇರಿ ಗಾಯತ್ರಿ ಸಹಕಾರ ಸಂಘ ಆರಂಭಿಸಿದ್ದು, ಈಗ ಲಕ್ಷಾಂತರ ರೂ. ಸಾಲ ಕೊಡುವಷ್ಟು ಬೆಳೆದು ನಿಂತಿದೆ. ಇದಕ್ಕೆ ಆಡಳಿತ ಮಂಡಳಿ ಕಾರಣ. ಬ್ರಾಹ್ಮಣ ಮಹಾಸಭಾದಿಂದ ವಿಪ್ರ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಶಿಕ್ಷಣ ನಿಧಿ ಆರಂಭಿಸಿದರೆ 5000 ರೂ. ದೇಣಿಗೆ ನೀಡಲಾಗುವುದು ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿ ನರಸಿಂಹಮೂರ್ತಿ, ಸಂಘಟನಾ ಕಾರ್ಯದರ್ಶಿ ಸತೀಶ್, ಪತ್ರಕರ್ತರ ಸಂಘದ ಅಧ್ಯಕ್ಷ ರಘುನಾಥ್, ಸಮಾಜದ ಶ್ರೀವತ್ಸ, ರಾಘವೇಂದ್ರ ಹೊಳ್ಳ, ನಾರಾಯಣರಾವ್. ವಿಪ್ರ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀವಿದ್ಯಾ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net