

ಐನಾಪುರ: ಅನ್ನ ನೀಡುವ ರೈತನಿಗೆ ಸಮಾಜದಲ್ಲಿ ಬೆಲೆಯಿಲ್ಲ. ವಿದ್ಯಾವಂತರಿಂದ ದೇಶಕ್ಕೆ ಮಾರಕ ಹೊರತು ಅವಿದ್ಯಾವಂತರಿಂದಲ್ಲ ಎಂದು ಬೀಳಗಿ ತಾಲೂಕಿನ ರೈತ ಚಿಂತಕ ಸಿದ್ದಪ್ಪ ಬಿದರಿ ಹೇಳಿದರು.
ಪಟ್ಟಣದ ಶ್ರೀಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಪ್ರಾಮಾಣಿಕವಾಗಿ ದುಡಿಯುವ ರೈತನಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಸಕ್ಕರೆ ಕಾರ್ಖಾನೆ ಹಾಗೂ ರೈತ ಮುಖಂಡರು ಮೋಸ ಮಾಡುತ್ತಿದ್ದಾರೆ. ಇದಲ್ಲದೇ ಕೂಲಿಕಾರರು ಸಹಿತ ಕೆಲಸ ಮಾಡದೆ ಅನ್ಯಾಯವಾಗುತ್ತಿದೆ ಎಂದರು. ಗುರುದೇವಾಶ್ರಮದ ಬಸವೇಶ್ವರ ಶ್ರೀಗಳು ಮಾತನಾಡಿದರು.
ಉಗಾರ ಸಕ್ಕರೆ ಕಾರ್ಖಾನೆ ಅಧಿಕಾರಿಗಳಾದ ಬಿ.ಬಿ.ಹೊಣ್ಣನವರ, ಜಗದೀಶ ಪಟವರ್ಧನ, ಅಣ್ಣಾಸಾಹೇಬ ಡೂಗನವರ, ಸಂಜು ಭಿರಡಿ, ಸುಭಾಷ ಪಾಟೀಲ, ಚಮತರಾವ ಪಾಟೀಲ, ಬಾಹುಬಲಿ ಕುಸನಾಳೆ, ಅಮಗೊಂಡ ಒಡೆಯರ, ಮಲ್ಲು ಕೋಲಾರ, ಮಂಜು ಕುಚನೂರೆ, ರಾಹುಲ ಬಣಜವಾಡ, ವಿಕಾಸ ಜಾಧವ, ಅಜೀತ ಹುಲವಾನ, ರವಿ ಮಾಳಿ, ಮಲ್ಲು ಕಾಲತಿಪ್ಪಿ ಇತರರಿದ್ದರು.