ಸರ್ಕಾರಿ ಶಾಲೆ ಅಭಿವೃದ್ಧಿಗೆ ದಾನಿಗಳ ಕೊಡುಗೆ ಅಗತ್ಯ

16 TKE 1,1
ನೇರಲಕೆರೆ ಗ್ರಾಮದ ಸರ್ಕಾರಿ ಶಾಲೆ ಮಕ್ಕಳಿಗೆ ದಾನಿ ಚಿಟ್ಟಕ್ಕಿ ಜಿ.ಬಸಪ್ಪ ಪಠ್ಯ ಸಾಮಗ್ರಿ ವಿತರಿಸಿದರು. ವೈ.ಬಿ.ಮಧು, ಎಚ್.ನಾಗರಾಜಪ್ಪ, ಕೆ.ಆರ್.ಶೇಖರನಾಯ್ಕ, ಎನ್.ಆರ್.ಓಂಕಾರಪ್ಪ ಇತರರಿದ್ದರು.
Published on

ತರೀಕೆರೆ: ಮಕ್ಕಳಿಗೆ ಉತ್ತೇಜಿಸಿದಾಗ ಮಾತ್ರ ಅವರಿಂದ ಸಾಧನೆ ನಿರೀಕ್ಷಿಸಲು ಸಾಧ್ಯ ಎಂದು ದಾನಿ ಚಿಟ್ಟಕ್ಕಿ ಜಿ.ಬಸಪ್ಪ ಹೇಳಿದರು.
ತಾಲೂಕಿನ ನೇರಲಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿದ್ದ 78ನೇ ಸ್ವಾತಂತ್ರೃ ದಿನಾಚಾರಣೆಯಲ್ಲಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ 9 ಲಕ್ಷ ರೂ. ದತ್ತಿ ಹಣದಲ್ಲಿ ಖರೀದಿಸಿದ ಪಠ್ಯ ಪರಿಕರ ಹಾಗೂ ಗ್ರಂಥಾಲಯಕ್ಕೆ ಬೇಕಾಗುವ ಪುಸ್ತಕ, ಸ್ಮಾರ್ಟ್ ತರಗತಿಗೆ ಟಿವಿ ವಿತರಿಸಿ ಮಾತನಾಡಿ, ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡುತ್ತಿದೆಯಾದರೆ, ಆರ್ಥಿಕವಾಗಿ ಸದೃಢರಾದವರು, ದಾನಿಗಳು ತಮ್ಮ ವ್ಯಾಪ್ತಿಯ ಶಾಲೆ ಪ್ರಗತಿಗೆ ಸಹಕರಿಸಬೇಕು. ಈ ಮೂಲಕ ಆಸಕ್ತ ವರ್ಗದ ಮಕ್ಕಳಿಗೆ ನೆರವಾಗಬೇಕು ಎಂದರು.
ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವೈ.ಬಿ.ಮಧು, ಸದಸ್ಯ ರಂಗನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ನಾಗರಾಜಪ್ಪ, ಮುಖ್ಯಶಿಕ್ಷಕ ಕೆ.ಆರ್.ಶೇಖರನಾಯ್ಕ, ಸಹ ಶಿಕ್ಷಕರಾದ ಚಿದಾನಂದಸ್ವಾಮಿ, ಸಿ.ಎಸ್.ಬಸವರಾಜಪ್ಪ , ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಆರ್.ಓಂಕಾರಪ್ಪ, ವಕೀಲ ಮಂಜುನಾಥ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net