ದಾನಿಗಳ ಕಾರ್ಯ ಮಾದರಿ

7KLD1
Published on

ಕುಲಗೋಡ: ಎಲ್‌ಕೆಜಿ-ಯುಕೆಜಿ ಮಕ್ಕಳಿಗೆ ಆಟದ ಮನೆ, ಉಚಿತ ಸಮವಸ ಹಾಗೂ ಕಲಿಕಾ ಸಾಮಗ್ರಿ ವಿತರಿಸಿರುವ ದಾನಿಗಳ ಕಾರ್ಯ ಶ್ಲಾಘನೀಯ ಎಂದು ಬಿಇಒ ಅಜಿತ್ ಮನ್ನಿಕೇರಿ ಹೇಳಿದರು.

ಸಮೀಪದ ಕೊಪ್ಪದಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎಲ್‌ಕೆಜಿ-ಯುಕೆಜಿ ತರಗತಿ ಉದ್ಘಾಟನೆ ಹಾಗೂ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಿಡಿಒ ಎಚ್.ವೈ.ತಾಳಿಕೋಟ್ಟಿ ಮಾತನಾಡಿದರು. ಶಿವಲಿಂಗಪ್ಪಜ್ಜ ಹುಬ್ಬಳ್ಳಿ , ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ ಉದಪುಡಿ, ಮುಖಂಡರಾದ ರಾಜಶೇಖರ ಬಾಗಿ, ಈರಣ್ಣ ಅರಕೇರಿ, ಗ್ರಾಪಂ ಸದಸ್ಯ ಗೋವಿಂದ ಉದಪುಡಿ, ನಿಂಗನಗೌಡ ಪಾಟೀಲ, ಈರಪ್ಪ ಮೋಡಿ, ಲಕ್ಷ್ಮಣ ಬಡಕಲ್ಲ, ಸುರೇಶ ತಳವಾರ, ಸಿಆರ್‌ಪಿ ವಿಠ್ಠಲ ಮಿಲಾನಟ್ಟಿ, ಮುಖ್ಯಶಿಕ್ಷಕ ವಿ.ಆರ್.ಬರಗಿ ಇತರರಿದ್ದರು. ಜಗದೀಶ ನಾಯ್ಕ ನಿರೂಪಿಸಿದರು, ಎಸ್.ಎಸ್.ಮುರಕಟ್ನಾಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net