

ಜನ್ನಾಡಿ: ಒಳ್ಳೆಯ ಮನಸ್ಸಿನಿಂದ ನೀಡಿದ ಕೊಡುಗೆಯಿಂದ ಸರ್ಕಾರಿ ವಿದ್ಯಾಸಂಸ್ಥೆಗಳು ಖಾಸಗಿಯವರಿಗೆ ಸರಿಸಮನಾಗಿ ಬೆಳೆಯಲು ಸಾಧ್ಯ ಎಂಬುದಕ್ಕೆ ಹಾಲಾಡಿ ಪದವಿ ಪೂರ್ವ ವಿದ್ಯಾಲಯವೇ ಸಾಕ್ಷಿ ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ಮಂಜುನಾಥ ಕಾಮತ್ ಹಾಲಾಡಿ ಹೇಳಿದರು.
ಹೆಗ್ಗುಂಜೆ ರಾಜೀವ ಶೆಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂ ಉದ್ಘಾಟನೆ, ದಾನಿಗಳಿಗೆ ಗೌರವ ಹಾಗೂ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಸಿಆರ್ ಸಮೂಹ ವಿದ್ಯಾಸಂಸ್ಥೆ ಟ್ರಸ್ಟಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆ ಪ್ರಾಂಶುಪಾಲ ಬಾಲಕೃಷ್ಣ ಭಟ್ ಕೆ. ಅಧ್ಯಕ್ಷತೆ ವಹಿಸಿದ್ದರು. ಸರ್ಕಾರದಿಂದ ಕಾಲೇಜಿಗೆ ಮಂಜೂರಾದ ಶೌಚಾಲಯವನ್ನು ಹಾಲಾಡಿ ಗ್ರಾಪಂ ಸದಸ್ಯ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಜನಾರ್ದನ ಉದ್ಘಾಟಿಸಿದರು.
ದಾನಿಗಳಾದ ಮಂಜುನಾಥ ಕಾಮತ್ ಹಾಲಾಡಿ, ಚಿತ್ರಕಲಾ ನಾಗರಾಜ್ ಅವರ ಪರವಾಗಿ ಪಾಂಡುರಂಗ ಶೆಣೈ ಹಾಗೂ ಪದ್ಮನಾಭ ಪೈ ಹಾಲಾಡಿ, ಶಂಕರ್ ನಾಯ್ಕ ರಟ್ಟಾಡಿ, ಜಯರಾಮ ಹಾಲಂಬಿ, ಲಕ್ಷ್ಮೀನಾರಾಯಣ, ಸಂದೀಪ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಳೆದ ವರ್ಷದ ಪರೀಕ್ಷೆಯಲ್ಲಿ ಸಾಧನೆ ವಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗ್ರಾ.ಪಂ. ಸದಸ್ಯ ಗುರುಪ್ರಾಸಾದ್ ಶೆಟ್ಟಿ, ಗುತ್ತಿಗೆದಾರ ಮಹೇಶ್ ಉಪಸ್ಥಿತರಿದ್ದರು. ಶ್ರೀಕುವಾರ್ ಸ್ವಾಗತಿಸಿದರು. ಚಂದ್ರಶೇಖರ್ ವಂದಿಸಿದರು. ವಿದ್ಯಾರ್ಥಿನಿಯರಾದ ಮೇನಾ ಮತ್ತು ಕೀರ್ತಿ ನಿರೂಪಿಸಿದರು.