ದಾನಿಗಳ ನೆರವಿನ ರಸ್ತೆ ಸಂಚಾರ ಮುಕ್ತ

27 10 2025_BGR_RURAL-PAGE_02
ದಾನಿಗಳು ಹಾಗೂ ಬಿದರಗುಪ್ಪೆ ಗ್ರಾಪಂ ಅನ ಉದಾನದ ನೆರವಿನಿಂದ ಅಭಿವೃದ್ಧಿಗೊಂಡ ಸಿಲ್ಕ್​ ಾರಂ ಸಿಮೆಂಟ್​ ರಸ್ತೆಯನ್ನು ಮಾಜಿ ಸಚಿವ ಎಸ್​.ಎನ್​.ಕೃಷ್ಣಯ್ಯಶೆಟ್ಟಿ ಲೋಕಾರ್ಪಣೆ ಮಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ರಾಜೇಶ್​, ಅಧ್ಯೆ ಅನುಪಮಾ ನಾರಾಯಣ್​ ಹಾಗೂ ಸ್ಥಳಿಯರು ಇದ್ದರು.
Published on

ಆನೇಕಲ್​ : ದಾನಿಗಳ ನೆರವು ಹಾಗೂ ಗ್ರಾಪಂ ಅನುದಾನದಿಂದ ಅಭಿವೃದ್ಧಿಪಡಿಸಿದ ತಾಲೂಕಿನ ಬಿದರಗುಪ್ಪೆ ಗ್ರಾಪಂ ವ್ಯಾಪ್ತಿಯ ಸಿಲ್ಕ್​ ಾಮ್​ರ್ ರಸ್ತೆ ಶನಿವಾರ ಸಾರ್ವಜನಿಕ ಬಳಕೆಗೆ ಮುಕ್ತವಾಯಿತು. ಎರಡು ದಶಕಗಳಿಂದ ಸಂಪೂರ್ಣವಾಗಿ ಹಾಳಾಗಿದ್ದ ರಸ್ತೆಯಲ್ಲಿ ಸಂಚಾರ ದುಸ್ತರವಾಗಿತ್ತು. ಇದನ್ನು ಮನಗಂಡ ಬಿದರಗುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷರಾದ ಬಿ.ರಾಜೇಶ್​ ಹಾಗೂ ಬಿ.ಆರ್​.ಮೂರ್ತಿ ಗ್ರಾಮ ಪಂಚಾಯಿತಿ ಅನುದಾನದ ಜತೆಗೆ ದಾನಿಗಳ ನೆರವು ಪಡೆದು ಕಾಂಕ್ರೀಟ್​ ರಸ್ತೆ ನಿರ್ಮಿಸಿದ್ದಾರೆ.

ರಸ್ತೆ ಲೋಕಾರ್ಪಣೆ ಬಳಿಕ ಮಾತನಾಡಿದ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಸಾರ್ವಜನಿಕರು ಪ್ರತಿನಿತ್ಯ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ರಸ್ತೆ ಅಭಿವೃದ್ಧಿಗೆ ಮುಂದಾದರು. ನಾನೂ ಕೈಲಾದ ನೆರವು ನೀಡಿದ್ದು, ಕಾಮಗಾರಿ ಗುಣಮಟ್ಟದಿಂದ ಕೂಡಿದೆ. ಗ್ರಾಮಮಟ್ಟದಲ್ಲಿ ಇಂತಹ ಸಮೂಹ ಕೆಲಸಗಳು ನಡೆಯಬೇಕು ಎಂದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿದರಗುಪ್ಪೆ ರಾಜೇಶ್​ ಮಾತನಾಡಿ, ಹಲವು ವರ್ಷಗಳಿಂದ ರಸ್ತೆ ಹಾಳಾಗಿ ಜನರಿಗೆ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಕೃಷ್ಣಯ್ಯ ಶೆಟ್ಟಿ ಮತ್ತು ಸ್ಥಳಿಯ ದಾನಿಗಳು, ಗ್ರಾಪಂನಿಂದ ಹಣವನ್ನು ಕ್ರೋಡಿಕರಿಸಿ ಕಾಂಕ್ರೀಟ್​ ಸೇರಿ ಎಲ್ಲ ರೀತಿಯ ನೆರವನ್ನು ಇಲ್ಲಿನ ಜನರು ನೀಡಿದ್ದಾರೆ. ಸಾರ್ವಜನಿಕರ ಸಂಕಷ್ಟ ದೂರವಾಗಿದೆ ಎಂದರು. ಗ್ರಾಪಂ ಉಪಾಧ್ಯೆ ಸರಸ್ವತಮ್ಮ ಶ್ರೀನಿವಾಸ್​, ಮುಖಂಡರಾದ ಎಸ್​.ವಿ.ಟಿ. ಲೋಕೇಶ್​ ರೆಡ್ಡಿ ಮತ್ತು ಸಿಲ್ಕ್​ಾರಂ ನಿವಾಸಿಗಳು ಹಾಗೂ ವಿವಿಧ ಬಡಾವಣೆಗಳ ನಾಗರಿಕರು ಇದ್ದರು.

ಗ್ರಾಪಂ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಸ್ಥಳಿಯ ನಿವಾಸಿಗಳು ಹಾಗೂ ದಾನಿಗಳು ಕೈಜೋಡಿಸುವ ಮೂಲಕ ಗುಣಮಟ್ಟದ ರಸ್ತೆ ನಿರ್ಮಿಸಿದ್ದು, ಹಾಳಾಗದಂತೆ ನೋಡಿಕೊಳ್ಳಬೇಕಾದುದು ಎಲ್ಲರ ಜವಾಬ್ದಾರಿ. > ಅನುಪಮಾ ನಾರಾಯಣ್​ ಅಧ್ಯೆ, ಬಿದರಗುಪ್ಪೆ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net