ಮಳೆಗಾಗಿ ಕತ್ತೆಗಳ ಮದುವೆ

29 web
Published on


ಬುಕ್ಕಾಪಟ್ಟಣ: ಕರ್ನಾಟಕ ಹಲವು ಜಾನಪದ ಸಾಂಸತಿಕ ನೆಲೆಗಳ ಬೀಡಾಗಿದ್ದು, ಇಲ್ಲಿನ ಸಂಪ್ರದಾಯ ಇತರ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಭಿನ್ನವಾಗಿದೆ. ಜನಪದರು ವರುಣನ ಬರುವಿಕೆಗಾಗಿ ಕಪ್ಪೆಗಳ ಮದುವೆ, ಮಳೆರಾಯನ ಉತ್ಸವ, ಕತ್ತೆಗಳ ಮದುವೆ, ಹರಿಸೇವೆ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬಂದ ರೂಢಿ ಇದೆ.
ಇದೇ ರೀತಿ ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ತುಪ್ಪದ ಕೋಣದ ಗೊಲ್ಲರಹಟ್ಟಿಯಲ್ಲಿ ಗುರುವಾರ ಸಂಜೆ ಕತ್ತೆಗಳ ವಿವಾಹ ವಿಜೃಂಭಣೆಯಿಂದ ನೆರವೇರಿತು.

ಮನುಷ್ಯರ ಮದುವೆಯಲ್ಲಿರುವ ಎಲ್ಲ ಶಾಸ್ತ್ರ ಸಂಪ್ರದಾಯಗಳು ಇಲ್ಲಿ ನೆರವೇರಿದವು. ಕತ್ತೆಗಳಿಗೆ ಸೀರೆ ಹಾಗೂ ಪಂಚೆ ಉಡಿಸಿ ವಧು&ವರರಿಗೆ ಸಿಂಗರಿಸಿ ಸುತ್ತಮುತ್ತಲಿನ ಏಳು ಹಳ್ಳಿಗಳ ಪ್ರತಿ ಮನೆಯಲ್ಲಿ ದಕ್ಷಿಣೆ ದವಸ ಧಾನ್ಯಗಳನ್ನು ತೆಗದುಕೊಂಡು ಮದುವೆಗೆ ಆಹ್ವಾನ ನೀಡಿ ಮದುವೆ ಕಾರ್ಯ ಹಾಗೂ ಹರಿಸೇವೆ ನಡೆಸಿದರು. ಚೆನ್ನಾಗಿ ಮಳೆ ಬಂದು ದರೆ ತಂಪಾಗಿ ಉತ್ತಮ ಬೆಳೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಗ್ರಾಮದ ಜಡೇಲಿಂಗೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಗ್ರಾಪಂ ಸದಸ್ಯರಾದ ಕರಿಯಪ್ಪ, ಪೂಜಾರ್​ ಜಡೆಯಪ್ಪ, ಬಸವರಾಜು, ಮಂಜುನಾಥ್​, ಕ್ಯಾತಪ್ಪ, ಉಮೇಶ್​, ಮುಖಂಡ ಮಾಹಾಲಿಂಗೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net