

ಗಜೇಂದ್ರಗಡ: ಪಟ್ಟಣದ ಜಗಜ್ಯೋತಿ ಬಸವೇಶ್ವರ ಎಪಿಎಂಸಿಯಲ್ಲಿರುವ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಶನಿವಾರ ಎಪಿಎಂಸಿ ಹಮಾಲರು, ವರ್ತಕರು ಮತ್ತು ರೈತರು ಸೇರಿ ಕತ್ತೆಗಳ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥಿಸಲಾಯಿತು.
ಕೋಟುಮಚಗಿ ಗ್ರಾಮದ ಕತ್ತೆಗಳಿಗೆ ಬಾಸಿಂಗ್ ಕಟ್ಟಿ, ಉಡುಪು ಹಾಕಿ, ಹೂಮಾಲೆಗಳಿಂದ ಸಿಂಗರಿಸಿ, ಪುರೋಹಿತರು ಮಂತ್ರ ಹೇಳಿದರು. ಅರ್ಚಕರ ಉಪಸ್ಥಿತಿಯಲ್ಲಿ ಮಾಂಗಲ್ಯಧಾರಣೆ ನೇರವೇರಿತು. ಸೇರಿದ್ದ ಜನರೆಲ್ಲ ಭಕ್ತಿ- ಭಾವದಿಂದ ಅಕ್ಷತೆ ಹಾಕಿ ಹಾರೈಸಿದರು. ಬಳಿಕ ಕಾಲಕಾಲೇಶ್ವರ ವೃತ್ತ, ಛತ್ರಪತಿ ಶಿವಾಜಿ ವೃತ್ತ, ಶ್ರೀ ದುರ್ಗಾ ವೃತ್ತ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಐ.ಡಿ. ಮ್ಯಾಗೇರಿ, ಅಮರೇಶ ಬಳಿಗೇರ, ಸುನೀಲ ನಂದಿಹಾಳ, ಸಂಗನಗೌಡ ಮಲ್ಲನಗೌಡ್ರ, ಶಿವಪ್ಪ ಸಂಗನಾಳ, ಐ.ಡಿ. ಮ್ಯಾಗೇರಿ, ಶ್ರೀಕಾಂತ ಡೊಳ್ಳಿನ, ರಾಚಪ್ಪ ಬುಳ್ಳಾ. ಬಸವರಾಜ ಕುಷ್ಟಗಿ, ಕುಮಾರ ಸಂಗಮದ, ಬಸವರಾಜ ಬಸರಕೋಡ, ಕಳಕಪ್ಪ ಸಂಗನಾಳ, ವಿನಾಯಕ ಪವಾರ, ಗುಂಡಪ್ಪ ಪಲ್ಲೇದ, ಬಾಬು ಮ್ಯಾಗೇರಿ, ಹನಮಗೌಡ ಪಾಟೀಲ, ಪರಸಪ್ಪ ಕಲಾಲ, ಸಿದ್ದಪ್ಪ ಚಲವಾದಿ, ಯಶವಂತ, ಮಹಾಮಥೇಶ ಮಳಗಿ, ಮರಿಯಪ್ಪ ದಿವಾಣದ, ಸಂಗಪ್ಪ ಚಲವಾದಿ, ಶರಣಪ್ಪ ಹಿರೇಕೊಪ್ಪ, ಇತರರಿದ್ದರು.