ಡೋಣಿ ತೀರದ ಜಮೀನುಗಳಲ್ಲಿ ಪ್ರವಾಹದಿಂದಾದ ಹಾನಿ ಪರಿಶೀಲನೆ

Doni shore, Land, Flood, Damage, Devahipparagi, Tehsildar,
ದೇವರಹಿಪ್ಪರಗಿ ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರು ಡೋಣಿ ನದಿ ಪ್ರವಾಹದಿಂದ ಹಾನಿಗೊಳಗಾದ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸಂಗಮೇಶ ಗ್ವಾಳೇದ, ಅನೀಲಕುಮಾರ ರಾಠೋಡ ಇತರರಿದ್ದರು.
Published on

ದೇವರಹಿಪ್ಪರಗಿ: ಡೋಣಿ ತೀರದ ಗ್ರಾಮಗಳಾದ ಯಾಳವಾರ, ಸಾತಿಹಾಳ, ಕೊಂಡಗೂಳಿ ಗ್ರಾಮಗಳಿಗೆ ತಹಸೀಲ್ದಾರ್ ಪ್ರಕಾಶ ಸಿಂದಗಿ ಅವರು ಶುಕ್ರವಾರ ಭೇಟಿ ನೀಡಿ ಪ್ರವಾಹದಿಂದಾದ ಹಾನಿ ಪರಿಶೀಲಿಸಿದರು.

ತಾಲೂಕಿನ ಡೋಣಿ ತೀರದ ಗ್ರಾಮಗಳು ಡೋಣಿ ನದಿಯ ಪ್ರವಾಹಕ್ಕೆ ಒಳಗಾಗಿದ್ದು, ಗ್ರಾಮಗಳ ವ್ಯಾಪ್ತಿಯ ಜಮೀನುಗಳು ನೀರಿನಿಂದ ಆವೃತವಾಗಿವೆ. ಇದರಿಂದ ಜಮೀನುಗಳಲ್ಲಿನ ತೊಗರಿ ಸೇರಿ ಬಹುತೇಕ ಬೆಳೆಗಳು ಹಾಳಾಗಿವೆ ಎಂದು ಕೆಲವು ದಿನಗಳ ಹಿಂದೆ ಕೊಂಡಗೂಳಿ ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಅವರು ಸಾತಿಹಾಳ ಗ್ರಾಮದ ಸೇತುವೆ ಹಾಗೂ ಡೋಣಿ ತೀರದ ಎಲ್ಲ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಬೆಳೆಗಳ ವಾಸ್ತವಿಕ ಸ್ಥಿತಿಗತಿ ಪರಿಶೀಲಿಸಿದರು.

ನಂತರ ಗ್ರಾಮಸ್ಥರೊಂದಿಗೆ ತಹಸೀಲ್ದಾರ್ ಮಾತನಾಡಿ, ನೀರು ನಿಂತು ಹಾಳಾದ ಬೆಳೆಗಳ ಕುರಿತು ಸರ್ಕಾರಕ್ಕೆ ಸಮಗ್ರ ಮಾಹಿತಿ ನೀಡಲಾಗುವುದು ಎಂದರು.

ಕಂದಾಯ ನಿರೀಕ್ಷಕ ಸಂಗಮೇಶ ಗ್ವಾಳೇದ, ಗ್ರಾಮಾಡಳಿತ ಅಧಿಕಾರಿಗಳಾದ ಅನೀಲಕುಮಾರ ರಾಠೋಡ, ಪ್ರಕಾಶ ಬನ್ನಟ್ಟಿ, ಸಿದ್ದು ನಾಯ್ಕೋಡಿ, ಕೃಷಿ ಇಲಾಖೆಯ ಪಾಟೀಲ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net