76.60 ಲಕ್ಷ ರೂ. ಮೌಲ್ಯದ ಕಾಣಿಕೆ ಸಂಗ್ರಹ

14ugl2
Published on

ಉಗರಗೋಳ: ಯಲ್ಲಮ್ಮನ ಗುಡ್ಡದ ದೇವಸ್ಥಾನದಲ್ಲಿ ಜು.1ರಿಂದ ಆ.10ರ ವರೆಗೆ ಅರ್ಪಿಸಲಾದ ಕಾಣಿಕೆ ಹುಂಡಿಯ ಎಣಿಕೆ ಕಾರ್ಯ ಗುರುವಾರ ಮುಗಿದಿದ್ದು, 69,61,450 ಲ ರೂ. ನಗದು, 5,84,100 ಲ ರೂ. ಬಂಗಾರ, 1,15,000 ರೂ. ಬೆಳ್ಳಿ ಆಭರಣ ಸೇರಿ 76,60,550 ರೂ. ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ.

ಮಳೆಯಿಂದಾಗಿ ದೇವಸ್ಥಾನ ಬಂದ್​ ಆಗಿದೆ ಎಂಬುದು ಸುಳ್ಳು. ಎಂದಿನಂತೆ ಭಕ್ತರು ದೇವಿ ದರ್ಶನ ಪಡೆದುಕೊಳ್ಳಬಹುದು ಎಂದು ಯಲ್ಲಮ್ಮ ದೇವಸ್ಥಾನ ಅಭಿವದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ಹೇಳಿದರು. ಉಪಕಾರ್ಯದರ್ಶಿ ನಾಗರತ್ನಾ ಚೋಳಿನ, ಬೆಳಗಾವಿ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ರೇಣುಕಾ ಶಿಂತ್ರಿ, ಶಿವಾನಂದ ನೇಸರಗಿ, ಅಲ್ಲಮಪ್ರಭು ಪ್ರಭುನವರ, ಎನ್​.ಎಂ. ಮುದಗೌಡ್ರ, ಆರ್​.ಎಚ್​. ಸವದತ್ತಿ, ಪ್ರಭು ಹಂಜಗಿ, ಎಎಸ್​ಐ ಡಿ.ಅರ್​. ಸಣ್ಣಮಾಳಗೆ, ಆನಂದ ಗೊರವನಕೊಳ್ಳ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net