

ಬೆಳ್ತಂಗಡಿ: ಸರ್ಕಾರಿ ಉನ್ನತೀಕರಿಸಿದ ಶಾಲೆ ಬದನಾಜೆಯ ಸಭಾಂಗಣ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದೇಣಿಗೆ ರೂಪದಲ್ಲಿ ಒಂದು ಲಕ್ಷ ರೂಪಾಯಿ ಮಂಜೂರಾಗಿದ್ದು, ಅನುದಾನದ ಚೆಕ್ಕನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ದ.ಕ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ, ನಿವೃತ್ತ ಪ್ರಾದೇಶಿಕ ನಿರ್ದೇಶಕ ಸೀತಾರಾಮ ಶೆಟ್ಟಿ ಕೆಂಬರ್ಜೆ, ಉಜಿರೆ ಮೇಲ್ವಿಚಾರಕಿ ವನಿತಾ, ಸೇವಾ ಪ್ರತಿನಿಧಿ ಹೇಮಲತಾ ಹಸ್ತಾಂತರಿಸಿದರು.
ಒಕ್ಕೂಟದ ಅಧ್ಯಕ್ಷರಾದ ಬಾಬು ನಾಯ್ಕ ಮತ್ತು ಸುರೇಶ್ ನಾಯ್ಕ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ನಿರಂಜನ್, ಸುಜ್ಞಾನ ನಿಧಿ ಯೋಜನೆಯ ಸಂಚಾಲಕ ಸುಂದರ ಬಂಗೇರ ಮತ್ತು ಸಹಸಂಚಾಲಕ ಸೋಮಶೇಖರ ಕೆ ಮತ್ತು ಪ್ರಗತಿ ಯುವಕ ಮಂಡಲದ ಅಧ್ಯಕ್ಷ ಪಿತಾಂಬರ ಪೂಜಾರಿ ಚೆಕ್ ಸ್ವೀಕರಿಸಿದರು.
ಬದನಾಜೆ ಶಾಲೆಯಲ್ಲಿ ಮಕ್ಕಳ ಕ್ಷೀರ ಭಾಗ್ಯ, ಅಕ್ಷರ ದಾಸೋಹ, ಶಾಲಾ ಪಾರ್ಥನೆಗೆ, ಸಭೆ ಸಮಾರಂಭಗಳಿಗೆ ಅನುಕೂಲವಾಗುವಂತೆ ಸುಮಾರು 15 ಲಕ್ಷ ರೂ.ವೆಚ್ಚದಲ್ಲಿ ಸಭಾಂಗಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಹಳೇ ವಿದ್ಯಾರ್ಥಿಗಳು, ಶಾಲಾಭಿಮಾನಿಗಳು ಕೈ ಜೋಡಿಸಿದ್ದಾರೆ.