

ಧಾರವಾಡ: ಧಾರವಾಡ ಕೇಂದ್ರ ಕಾರಾಗೃಹದ ಬಂದಿಗಳು ಅನಾರೋಗ್ಯಕ್ಕೆ ಒಳಗಾದಾಗ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ರೌಂಡ್ ಟೇಬಲ್ ಇಂಡಿಯಾ ಏರಿಯಾ- ೧೦ ಹುಬ್ಬಳ್ಳಿ- ಧಾರವಾಡದ ಚೇರ್ಮನ್ ಹಿಮಾಂಶು ಕೊಠಾರಿ, ೧೫೩- ಟೇಬಲ್ ಚೇರ್ಮನ್ ತುಷಾರ್ ಕವಳೇಕರ, ಸದಸ್ಯರಾದ ಅನ್ಸಲ್ ಫರ್ನಾಂಡಿಸ್ ಹಾಗೂ ರಾಹುಲ್ ಪವಾರ ಅವರು ೫ ಗಾಲಿಕುರ್ಚಿಗಳನ್ನು ದೇಣಿಗೆ ನೀಡಿದರು. ಕಾರಾಗೃಹ ಅಽÃಕ್ಷಕ ಎಂ.ಎ. ಮರಿಗೌಡ, ಜೈಲರ್‌ಗಳು ಹಾಗೂ ರೌಂಡ್ ಟೇಬಲ್ ಇಂಡಿಯಾ ಏರಿಯಾದ ಸದಸ್ಯರಿದ್ದರು.