ಅಕ್ಷಯಪಾತ್ರ ಫೌಂಡೇಷನ್‌ಗೆ ವಾಹನ ಕೊಡುಗೆ

29
Published on

ಮೈಸೂರು: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹಾಗೂ ಗೋಲ್ಡನ್ ಜ್ಯುಬಿಲಿ ಫೌಂಡೇಷನ್‌ನಿಂದ ಆಹಾರ ಸರಬರಾಜು ಮಾಡಲು ಇಸ್ಕಾನ್‌ನ ಅಕ್ಷಯಪಾತ್ರೆ ಫೌಂಡೇಷನ್‌ಗೆ ಸೋಮವಾರ ವಾಹನವನ್ನು ಹಸ್ತಾಂತರಿಸಲಾಯಿತು.
ಜಯನಗರದ ಇಸ್ಕಾನ್ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಸ್ಕಾನ್‌ನ ಶ್ರೀ ಕೃಷ್ಣ ಸ್ವಾಮಿ ಮಹಾರಾಜ್ ಅವರಿಗೆ ಎಲ್‌ಐಸಿ ಕರ್ನಾಟಕ ಪ್ರಾದೇಶಿಕ ಮಾರುಕಟ್ಟೆ ವ್ಯವಸ್ಥಾಪಕ ಎಂ.ರವಿಕುಮಾರ್ ವಾಹನದ ಕೀ ನೀಡಿದರು. ಬಳಿಕ ಮಾತನಾಡಿದ ಅವರು, ಎಲ್‌ಐಸಿ ಗೋಲ್ಡನ್ ಜ್ಯುಬಿಲಿ ಫೌಂಡೇಷನ್‌ನಿಂದ ವಿವಿಧ ಯೋಜನೆಗಳಿಗೆ ಸ್ವಯಂಪ್ರೇರಣೆಯಿಂದ ನಾನಾ ಸಾಮಾಜಿಕ ಕಾರ್ಯಗಳಿಗೆ ಬೆಂಬಲ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹವಾಗಿ ವಿದ್ಯಾರ್ಥಿವೇತನ ಸೇರಿದಂತೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದರು.
ಮೈಸೂರು ವಿಭಾಗದ ಎಲ್‌ಐಸಿಯ ಹಿರಿಯ ವಿಭಾಗೀಯ ವ್ಯವಸ್ಥಾಪಕಿ ಎಂ.ಕೃಷ್ಣವೇಣಿ ಮಾತನಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವಲ್ಲಿ ಪ್ರತಿಷ್ಠಾನವು ಸಲ್ಲಿಸುತ್ತಿರುವ ಅಮೋಘ ಸೇವೆ ಶ್ಲಾಘನೀಯ. ಈ ಕಾರ್ಯದಿಂದ ಮಕ್ಕಳ ಶಿಕ್ಷಣದ ಮುಂದುವರಿಕೆ ಹಾಗೂ ಈ ದೇಶಕ್ಕೆ ಅಗತ್ಯ ಮಾನವ ಸಂಪನ್ಮೂಲದ ಸೇರ್ಪಡೆಗೆ ಕಾರಣವಾಗಿದೆ ಎಂದು ತಿಳಿಸಿದರು.
ಅಕ್ಷಯ ಪಾತ್ರೆ ಪ್ರತಿಷ್ಠಾನದ ಮೈಸೂರು ಮುಖ್ಯಸ್ಥ ಶ್ರೀಕೃಷ್ಣ ಕೇಶವ ದಾಸ, ಎಲ್‌ಐಸಿ ಮಾರುಕಟ್ಟೆ ವ್ಯವಸ್ಥಾಪಕ ಎಂ.ಎಸ್.ಜೀವನ್ ಕುಮಾರ್, ಮಾರಾಟ ವ್ಯವಸ್ಥಾಪಕ ಕೆ.ಶ್ರೀಕಾಂತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net