

ಮಡಿಕೇರಿ: ಕತ್ತಲೆಕಾಡುವಿನ ವಿನಾಯಕ ಭಕ್ತ ವೃಂದ ಗಣೇಶೋತ್ಸವ ಸಮಿತಿಗೆ ಗ್ರಾಮಸ್ಥರು ಹಾಗೂ ದಾನಿಗಳು ವಿವಿಧ ಪರಿಕರಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಈ ಬಾರಿ ೧೭ನೇ ವರ್ಷದ ಗೌರಿ ಗಣೇಶೋತ್ಸವ ಆಚರಿಸುತ್ತಿದ್ದು, ಪೂಜಾ ಕಾರ್ಯ ಹಾಗೂ ಇನ್ನಿತರೆ ಚಟುವಟಿಕೆಗಳಿಗೆ ಅಂದಾಜು ೧ ಲಕ್ಷ ರೂ. ಮೊತ್ತದ ಪರಿಕರಗಳು ಕೊಡುಗೆ ರೂಪದಲ್ಲಿ ಬಂದಿದೆ. ಪ್ರತಿ ವರ್ಷ ವಸ್ತುಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗುತ್ತಿತ್ತು. ಇದೀಗ ಹಲವು ಅಗತ್ಯ ವಸ್ತುಗಳು ಸಮಿತಿಯ ಸಂಗ್ರಹದಲ್ಲಿರುವುದರಿಂದ ಗಣೇಶೋತ್ಸವ ಹಾಗೂ ಮುಂದಿನ ದಿನದಲ್ಲಿ ಜರುಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಇವುಗಳನ್ನು ಬಳಸಿಕೊಳ್ಳಲಾಗುವುದು ಎಂದು ಸಮಿತಿಯ ಅಧ್ಯಕ್ಷ ಎಂ.ಎಸ್.ಅಶೋಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಮೈಸೂರಿನಿಂದ ಅಡುಗೆ ಪಾತ್ರೆ, ಗ್ಯಾಸ್ ಸ್ಟೌ, ಚೇರ್, ಟೇಬಲ್, ಪೂಜಾ ಸಾಮಾಗ್ರಿ ಸೇರಿದಂತೆ ವಿವಿಧ ವಸ್ತುಗಳ ಖರೀದಿಸಲಾಯಿತು. ಈ ಸಂದರ್ಭ ಬ್ರಿಜೇಶ್ ರೈ, ಹೊನ್ನಪ್ಪ ಆಚಾರ್ಯ, ಸತೀಶ್ ರೈ ಇದ್ದರು.