ರೋಟರಿ ಚಿತಾಗಾರಕ್ಕೆ 1.75 ಲಕ್ಷ ರೂ.ದೇಣಿಗೆ

30KDR3
Published on

ಕಡೂರು: ಪಟ್ಟಣದ ಶ್ರೀ ಚಂದ್ರಮೌಳ್ವೇಶ್ವರ ದೇವಾಲಯದ ರುದ್ರಭೂಮಿಯಲ್ಲಿ ಕಡೂರು ರೋಟರಿ, ವಿವಿಧ ಸಮಾಜಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸ್ಥಾಪಿಸಲು ಹೊರಟಿರುವ ಅನಿಲ ಚಿತಾಗಾರಕ್ಕೆ ತಾಲೂಕು ಬ್ರಾಹ್ಮಣ ಸಮಾಜ 1.75 ಲಕ್ಷ ರೂ. ದೇಣಿಗೆ ನೀಡಿದೆ ಎಂದು ಚಿತಾಗಾರ ಸಮಿತಿ ಅಧ್ಯಕ್ಷ ರೋಟರಿಯನ್ ಕೆ.ಪಿ.ರಾಘವೇಂದ್ರ ತಿಳಿಸಿದರು.

ಪಟ್ಟಣದ ಕೋಟೆಯಲ್ಲಿರುವ ಶ್ರೀಚನ್ನಕೇಶವ ಸ್ವಾಮಿ ದೇವಾಲಯದ ಆವರಣದಲ್ಲಿ ಚೆಕ್ ಸ್ವೀಕರಿಸಿ ಮಾತನಾಡಿದ ಅವರು, ರೋಟರಿ ಸಂಸ್ಥೆ ಸಾರ್ವಜನಿಕರ ಸಹಕಾರದೊಂದಿಗೆ ಅಂದಾಜು 65ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲು ಹೊರಟಿರುವ ಅನಿಲ ಚಿತಾಗಾರಕ್ಕೆ ಈಗಾಗಲೇ 38 ಲಕ್ಷ ರೂ.ಸಂಗ್ರಹವಾಗಿದೆ. ಇದೀಗ ತಾಲೂಕು ಬ್ರಾಹ್ಮಣ ಸಮಾಜ 1.75 ಲಕ್ಷ ರೂ. ಚಿತಾಗಾರ ಅಭಿವೃದ್ಧಿಗೆ ನೀಡಿರುವುದು ಸಹಕಾರಿಯಾಗಿದೆ ಎಂದರು.

ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ ನಮ್ಮ ಸಮಾಜದ ಬಂಧುಗಳ ಸಹಕಾರದಿಂದ ಅನಿಲ ಚಿತಾಗಾರಕ್ಕೆ ದೇಣಿಗೆ ರೂಪದಲ್ಲಿ ಹಣ ನೀಡಿದ್ದು. ಸಮಾಜಮುಖಿ ಕೆಲಸಗಳಿಗೆ ಬ್ರಾಹ್ಮಣ ಸಮಾಜ ಸ್ಪಂದಿಸುತ್ತದೆ ಎಂದರು. ರೋಟರಿಯ ಟಿ.ಡಿ.ಸತ್ಯನ್, ಶಿವಕುಮಾರ್, ಪ್ರೇಮ್ ಕುಮಾರ್, ರಘುರಾಮ್, ಡಾ.ಉಮೇಶ್‌ರಾವ್, ಗಂಗಾಧರ್, ಸುರೇಶ್, ರಘು, ಗಾಯತ್ರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net