ಕುಮಾರೇಶ್ವರ ಆಸ್ಪತ್ರೆಗೆ ಮಾನಿಟರ್ ಯಂತ್ರ ದೇಣಿಗೆ

Donation of Monitor Machine to Kumareshwar Hospital
ಬಾಗಲಕೋಟೆ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಗೆ ಉಜ್ಜೀವನ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಬಾಗಲಕೋಟೆ ಶಾಖೆಯಿಂದ ಎರಡು ಕಾಂಟೆಕ್ ಪೇಶಂಟ್ ಮಾನಿಟರ್ ಯಂತ್ರಗಳನ್ನು ದೇಣಿಗೆಯಾಗಿ ನೀಡಲಾಯಿತು. ಶಂಕರ ವಿಕಾಸ, ಕೆ.ಎಂ.ತೌಫಿಕ್, ಸಂದೀಪ ಬೊಂಗಾಳೆ, ಅಶೋಕ.ಎಂ.ಸಜ್ಜನ (ಬೇವೂರ), ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ಡಾ.ಭುವನೇಶ್ವರಿ ಯಳಮಲಿ, ಡಾ.ಶ್ರೀರಾಮ ಕೋರಾ ಉಪಸ್ಥಿತರಿದ್ದರು.
Published on

ಬಾಗಲಕೋಟೆ: ನಗರದ ಬಿವಿವಿ ಸಂಘದ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಗೆ ಉಜ್ಜೀವನ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಬಾಗಲಕೋಟೆ ಶಾಖೆಯಿಂದ ಅಂದಾಜು 1 ಲಕ್ಷ ರೂ. ಮೌಲ್ಯದ ಎರಡು ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಕಾಂಟೆಕ್ ಪೇಶಂಟ್ ಮಾನಿಟರ್-ಸಿಎಮ್‌ಎಸ್ 8000 ಯಂತ್ರಗಳನ್ನು ದೇಣಿಗೆಯಾಗಿ ನೀಡಲಾಯಿತು.

ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಈ ಅತ್ಯಾಧುನಿಕ ಯಂತ್ರಗಳು ತೀವ್ರ ನಿಗಾ ಘಟಕ, ನವಜಾತ ಶಿಶುಗಳ ತೀವ್ರನಿಗಾ ಘಟಕ ಮತ್ತು ಶಸಚಿಕಿತ್ಸಾ ಘಟಕಗಳಲ್ಲಿ ಬಳಕೆಯಾಗುತ್ತವೆ. ತೀವ್ರ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಹೃದಯ ಬಡಿತ, ನಾಡಿ ಬಡಿತ, ರಕ್ತದೊತ್ತಡ, ಇಸಿಜಿ, ದೇಹದ ಉಷ್ಣತೆ ಇತ್ಯಾದಿ ಮಾಹಿತಿಯನ್ನು ಏಕಕಾಲಕ್ಕೆ ನೀಡುತ್ತವೆ. ರೋಗಿಯ ವಿವಿಧ ವೈದ್ಯಕೀಯ ಮಾಹಿತಿ ತ್ವರಿತವಾಗಿ ದೊರೆಯುವುದರಿಂದ ವೈದ್ಯರು ರೋಗಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ ಎಂದು ಹೇಳಿದರು.

ಉಜ್ಜೀವನ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಸರ್ಕಲ್ ಬಿಜಿನೆಸ್ ಮುಖ್ಯಸ್ಥ ಶಂಕರ ವಿಕಾಸ, ರೀಜನಲ್ ಮ್ಯಾನೇಜರ್ ಕೆ.ಎಂ.ತೌಫಿಕ್, ಸೀನಿಯರ್ ರೀಜನಲ್ ಹೆಡ್ ಸಂದೀಪ ಬೊಂಗಾಳೆ, ಕ್ಲಸ್ಟರ್ ಮುಖ್ಯಸ್ಥ ಪ್ರವೀಣ ಮತ್ತಿಕಳ್ಳಿ, ಬಾಗಲಕೋಟೆ ಬ್ರ್ಯಾಂಚ್ ಮುಖ್ಯಸ್ಥ ತಿಮ್ಮಣ್ಣ ಮೆರಾಕರ, ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ.ಎಂ.ಸಜ್ಜನ (ಬೇವೂರ), ವೈದ್ಯಕೀಯ ಆಡಳಿತ ಮಂಡಳಿ ಸದಸ್ಯರು, ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕ ಮಲ್ಲಾಪೂರ, ವೈದ್ಯಕೀಯ ಅಧೀಕ್ಷಕಿ ಡಾ.ಭುವನೇಶ್ವರಿ ಯಳಮಲಿ, ಡಾ.ಶ್ರೀರಾಮ ಕೋರಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net