

ಜನ್ನಾಡಿ: ಕುಂದಾಪುರದ ಬಿ.ಆರ್.ರಾಯರ ಹಿಂದು ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೈ ದಾನಿ, ಶಾಲೆ ಆಡಳಿತ ಮಂಡಳಿ ಸದಸ್ಯ ದತ್ತಾನಂದ ಗಂಗೊಳ್ಳಿ ಇನ್ವರ್ಟರ್ ಕೊಡುಗೆಯಾಗಿ ನೀಡಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ಕೊಡುಗೆ ಸ್ವೀಕರಿಸಿ, ದತ್ತಾನಂದರನ್ನು ಸನ್ಮಾನಿಸಿದರು. ಮುಖ್ಯ ಶಿಕ್ಷಕ ನಿಂಗಪ್ಪ ಸ್ವಾಗತಿಸಿದರು. ಗೌರವ ಶಿಕ್ಷಕಿ ಮೀರಾ ಶೇಟ್ ವಂದಿಸಿದರು.