

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹಿರಿಯ ಪ್ರಾಥಮಿಕ ಶಾಲೆಗೆ ಶಾಹಿ ಎಕ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ ವತಿಯಿಂದ 12.5 ಲಕ್ಷ ರೂ. ಮೌಲ್ಯದ ಮಿನಿ ವಿಜ್ಞಾನ ಪ್ರಯೋಗಾಲಯ ಪೀಠೋಪಕರಣಗಳಾದ 72 ಇಂಚಿನ ಪ್ಯಾನಲ್ ಬೋರ್ಡ್, ವಾಟರ್ ಪ್ಯೂರಿಫೈ, ಆಟೋಪಕರಣ ಇತರ ಸಾಮಗ್ರಿಗಳನ್ನು ದೇಣಿಗೆ ನೀಡಲಾಯಿತು.
ಕಂಪನಿ ಮುಖ್ಯಸ್ಥ ನಾಗಯ್ಯ ಶುಕ್ರವಾರ ಶಾಲೆಗೆ ಕೊಡುಗೆ ನೀಡಿ ಮಾತನಾಡಿ, ನಮ್ಮ ಸಂಸ್ಥೆ ಕನ್ನಡ ಶಾಲೆಗಳ ಅಭಿವೃದ್ಧಿಗೋಸ್ಕರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಪ್ರತಿವರ್ಷ ಒಂದು ಶಾಲೆ ಆಯ್ಕೆ ಮಾಡಿಕೊಂಡು, ಮಕ್ಕಳು ಹಾಗೂ ಶಿಕ್ಷಕರಿಗೆ ಅನುಕೂಲವಾಗುವಂತೆ ಕೊಡುಗೆ ನೀಡಲಾಗುತ್ತಿದೆ ಎಂದು ಹೇಳಿದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಧನಂಜಯ, ಮುಖ್ಯಶಿಕ್ಷಕ ಮರುಳಪ್ಪ, ಉಮೇಶ್, ಮಂಜುನಾಥ್, ಪ್ರಿತೇಶ್, ಪ್ರವೀಣ್, ಸಾಚಾ ಹರಿಶ್ಚಂದ್ರ ಇತರರು ಇದ್ದರು.