ಜ್ಞಾನದೀಪ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗೆ ಡೆಸ್ಕ್‌ಗಳ ಕೊಡುಗೆ

21sunti01
ಕಾನ್‌ಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಬೆಂಚ್ ಡೆಸ್ಕ್‌ಗಳು.
Published on

ಸುಂಟಿಕೊಪ್ಪ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಕಾರ್ಯಕ್ರಮದಡಿ ಸುಂಟಿಕೊಪ್ಪ ವಲಯ ವ್ಯಾಪ್ತಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ 43 ಬೆಂಚ್ ಹಾಗೂ ಡೆಸ್ಕ್‌ಗಳನ್ನು ಸೋಮವಾರ ವಿತರಣೆ ಮಾಡಲಾಯಿತು.

ಸುಂಟಿಕೊಪ್ಪ ವಲಯದ ಸರ್ಕಾರಿ ಪ್ರೌಢಶಾಲೆ, ಸಂತಮೇರಿ ಆಂಗ್ಲ ಸಮೂಹ ಮಾಧ್ಯಮ ಶಾಲೆ ಕಾನ್‌ಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಜ್ಞಾನದೀಪ ಕಾರ್ಯಕ್ರಮದಡಿಯಲ್ಲಿ ಶೇ.80 ರಷ್ಟು ಸಹಾಯಧನದಲ್ಲಿ ಶಾಲಾ ಮಕ್ಕಳಿಗೆ ಬೇಕಾದ ಡೆಸ್ಕ್, ಬೆಂಚ್‌ಗಳನ್ನು ವಿತರಿಸಲಾಯಿತು.

ಜ್ಞಾನದೀಪ ಯೋಜನೆಗೆ ಶೇ. 20 ರಷ್ಟು ಸಹಾಯಧನವನ್ನು ನಾಕೂರು ಶಿರಂಗಾಲ ಗ್ರಾಮದ ದಾನಿಗಳು ಹಾಗೂ ಕಾಫಿ ಬೆಳೆಗಾರರಾದ ಚೆಪ್ಪುಡಿರ ಅಯ್ಯಣ್ಣ 5,100 ರೂ., ಅಯ್ಯಪ್ಪ 5,100 ರೂ., ಪ್ರಿನ್ಸ್ ಚಂಗಪ್ಪ 5,100 ರೂ., ಪೊನ್ನಣ್ಣ 3,400 ರೂ., ಕಾರ್ಯಪ್ಪ 3,400 ರೂ.ಗಳನ್ನು ಸಂಗ್ರಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಯೋಜನೆಗೆ ಪಾವತಿಸುವ ಮೂಲಕ ಶಾಲೆಗೆ ನೂತನ ಬೆಂಚ್, ಡೆಸ್ಕ್‌ಗಳನ್ನು ಮಕ್ಕಳ ಜ್ಞಾನರ್ಜನೆಗೆ ಸಹಾಯವಾಗಲೆಂದು ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕಿ ಭವ್ಯಾ ಹಾಗೂ ಸೇವಾ ಪ್ರತಿನಿಧಿ ಯಶೋದಾ ಬಸವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net