

ಹಾನಗಲ್ಲ: ತಾಲೂಕಿನ ಹರವಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಾಸಕ ಶ್ರೀನಿವಾಸ ಮಾನೆ ಅಭಿಮಾನಿಗಳು ಬುಧವಾರ ಡೆಸ್ಕ್‌ಗಳನ್ನು ಕೊಡುಗೆಯಾಗಿ ನೀಡಿದರು.
ಸನ್ಮಾನದ ಬದಲಿಗೆ ಅದಕ್ಕೆ ವ್ಯಯ ಮಾಡುವ ಹಣವನ್ನು ಸರ್ಕಾರಿ ಶಾಲೆಗಳಿಗೆ ಕೊಡುಗೆಯಾಗಿ ನೀಡಿ ಎಂಬ ಸಂದೇಶ ನೀಡಿದ್ದ ಶಾಸಕ ಮಾನೆ ಅವರ ಕರೆಗೆ ಓಗೊಟ್ಟ ಅಭಿಮಾನಿಗಳು, ಗ್ರಾಮಕ್ಕೆ ಶಾಸಕರನ್ನು ಆಹ್ವಾನಿಸಿ, ಸಮಾರಂಭ ಆಯೋಜಿಸಿ ಸನ್ಮಾನಕ್ಕಾಗಿ ಹಣ ವ್ಯಯ ಮಾಡದೇ ಅದರ ಬದಲು ಸರ್ಕಾರಿ ಶಾಲೆಗೆ ಡೆಸ್ಕ್‌ಗಳನ್ನು ಕೊಡುಗೆ ನೀಡಿ ಗಮನ ಸೆಳೆದರು.
ಗ್ರಾಮಸ್ಥ ಗನಿ ಪಟೇಲ್ ಮಾತನಾಡಿ, ಸಭೆ, ಸಮಾರಂಭ, ಸನ್ಮಾನ ನೆಪದಲ್ಲಿ ಹಣ ಪೋಲು ಮಾಡದೇ ಅದೇ ಹಣವನ್ನು ಶಾಲೆಗಳಿಗಾಗಿ ಬಳಕೆ ಮಾಡಿ ಎಂದು ಶಾಸಕರು ಹೇಳಿದ್ದರಿಂದ ಗ್ರಾಮದ ಸರ್ಕಾರಿ ಶಾಲೆಗೆ ಡೆಸ್ಕ್‌ಗಳನ್ನು ಒದಗಿಸಿದ್ದೇವೆ ಎಂದರು.
ಗ್ರಾಪಂ ಸದಸ್ಯರಾದ ಬಸವರಾಜಪ್ಪ ಭದ್ರಣ್ಣನವರ, ಕಮಲವ್ವ ತಳವಾರ, ನಾಗರಾಜ ಎರೇಸೀಮಿ, ಮಲ್ಲಿಕಾರ್ಜುನಪ್ಪ ಎರೇಸೀಮಿ, ಶಂಭಣ್ಣ ಭದ್ರಣ್ಣನವರ, ಸಂಗಪ್ಪ ತಳವಾರ, ಪೂರ್ವಾಚಾರಿ ಬಡಿಗೇರ, ಶೇಕಪ್ಪ ಬಾಣದ, ಸುರೇಶ ಎರೇಸೀಮಿ ಇತರರು ಉಪಸ್ಥಿತರಿದ್ದರು.