ಸ್ವಸ್ತಿಶ್ರೀ ಕಾಲೇಜಿಗೆ ಪುಸ್ತಕ ಕಪಾಟು ಕೊಡುಗೆ

Mbd_kapatu
Published on

ಮೂಡುಬಿದಿರೆ: ಇಲ್ಲಿನ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿಯವರು ಸ್ಥಾಪಿಸಿದ ಸ್ವಸ್ತಿಶ್ರೀ ಜೈನ ವಸತಿ ಪದವಿಪೂರ್ವ ಕಾಲೇಜಿಗೆ ಗುರುವಾರ ಪುಸ್ತಕ ಇಡುವ ಕಪಾಟನ್ನು ಕೊಡುಗೆಯಾಗಿ ನೀಡಲಾಯಿತು.

ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ದೇವರ ಪೂಜೆ, ಗುರು ಹಿರಿಯರ ಆಶೀರ್ವಾದ ಪಡೆದು, ದಾನ&ಧರ್ಮದೊಂದಿಗೆ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವುದು ಭಾರತೀಯ ಸಂಸತಿ ಎಂದರು.

ಇನ್ನರ್​ ವೀಲ್​ ಕ್ಲಬ್​ನ ಬಿಂದಿಯಾ ಶರತ್​ ಕುಮಾರ್​ ಶೆಟ್ಟಿ ಇನ್ನರ್​ ವೀಲ್​ ಕ್ಲಬ್​ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಆಟೋಟ ಉಪಕರಣಗಳನ್ನು ಹಾಗೂ ಪುಸ್ತಕ ಇಡುವ ಕಪಾಟನ್ನು ಕೊಡುಗೆಯಾಗಿ ನೀಡಿದರು. ಪ್ರಾಂಶುಪಾಲೆ ಸೌಮ್ಯಶ್ರೀ ಸ್ವಾಗತಿಸಿದರು. ಉಪನ್ಯಾಸಕಿ ಪವನಶ್ರೀ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net