ಉಚ್ಚಿಲ ಪಿಎಂಶ್ರೀ ಸರ್ಕಾರಿ ಶಾಲೆಗೆ ಬೆಂಚ್​, ಡೆಸ್ಕ್​ ಕೊಡುಗೆ

Ull_PMshree
Published on

ಉಳ್ಳಾಲ: ಶಾಲೆ ಅಭಿವೃದ್ಧಿ ಆಗಬೇಕಾದರೆ ಸರ್ಕಾರದ ಜತೆ ಸಂಘ&-ಸಂಸ್ಥೆಗಳು ಕೈ ಜೋಡಿಸಬೇಕು ಎಂದು ರೋಟರಿ ಕ್ಲಬ್​ ಜಿಲ್ಲೆ 3181 ಗವರ್ನರ್​ ವಿಕ್ರಮ್​ ದತ್ತ ಹೇಳಿದರು.

ಮಂಗಳೂರು ಕೇಂದ್ರ ರೋಟರಿ ಕ್ಲಬ್​ ವತಿಯಿಂದ ಉಚ್ಚಿಲ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಚ್​ ಮತ್ತು ಡೆಸ್ಕ್​ಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಂಗಳೂರು ಕೇಂದ್ರ ರೋಟರಿ ಕ್ಲಬ್​ ಅಧ್ಯಕ್ಷ ಬ್ರಿಯಾನ್​ ಪಿಂಟೋ ಹಾಗೂ ರೋಟರಿ ಗವರ್ನರ್​ ವಿಕ್ರಮ್​ ದತ್ತ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.

ಮಂಗಳೂರು ಕೇಂದ್ರ ರೋಟರಿ ಕ್ಲಬ್​ ಅಧ್ಯಕ್ಷ ಬ್ರಿಯಾನ್​ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ಸೋಮೇಶ್ವರ ಪುರಸಭಾ ಸದಸ್ಯ ಅಬ್ದುಲ್​ ಸಲಾಂ, ಸಮಾಜ ಸೇವಕ ಅಬ್ದುಲ್​ ರಹೀಮ್​ ಉಚ್ಚಿಲ್​, ಸಹಾಯಕ ಗವರ್ನರ್​ ಕೆ.ಎಂ.ಹೆಗ್ಡೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಹಸೀನಾ, ರಾಜಗೋಪಾಲ್​ ರೈ, ಭಾಸ್ಕರ್​ ರೈ, ಶಾಲಾ ಶಿಕ್ಷಕಿ ಸಂಧ್ಯಾಕುಮಾರಿ ಮೊದಲಾದವರಿದ್ದರು. ಶಿಕ್ಷಕ ಮಂಜುನಾಥ್​ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮೋಹನ್​ ಶಿರ್ಲಾಲ್​ ನಿರೂಪಿಸಿದರು. ಚಂದ್ರಶೇಖರ ಸಿ.ಎಚ್​. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net