ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ 1,250 ಗ್ರಾಂ ಬೆಳ್ಳಿ ದೇಣಿಗೆ

h5-durgadevi
Published on

ಹುಬ್ಬಳ್ಳಿ: ಇಲ್ಲಿನ ದಾಜಿಬಾನಪೇಟೆಯ ಎಸ್​ಎಸ್​ಕೆ ಪಂಚ ಟ್ರಸ್ಟ್ ಶ್ರೀ ದುರ್ಗಾದೇವಿ ದೇವಸ್ಥಾನದ ಶ್ರೀ ದ್ಯಾಮವ್ವದೇವಿ ಹಾಗೂ ಶ್ರೀ ದುರ್ಗಾದೇವಿಯರ ಬೆಳ್ಳಿಯ ಪ್ರಭಾವಳಿಗಾಗಿ 1,250 ಗ್ರಾಂ ಬೆಳ್ಳಿಯನ್ನು ಮಂಗಳವಾರ ಅರ್ಪಿಸಲಾಯಿತು.

ಲತಾ ಹನುಮಂತರಾವ್ ಜಾಧವ ದೇಣಿಗೆ ನೀಡಿದರು. ಪಂಚ ಟ್ರಸ್ಟ್ ಕಮಿಟಿಯಿಂದ ಜಾಧವ ಅವರನ್ನು ಸನ್ಮಾನಿಸಲಾಯಿತು.

ಜ್ಯೋತಿಬಾ ಜಾಧವ, ಅಮಿತ ಜಾಧವ, ಸರಿತಾ ಹಾಗೂ ಭಾಗ್ಯಶ್ರೀ, ಊರ್ವಶಿ, ದೀಪಾ ಅವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂಸ್ಥೆಯ ಚೀಫ್ ಟ್ರಸ್ಟಿ ತಾರಾಸಾ ದೊಂಗಡಿ, ಗೌರವ ಕಾರ್ಯದರ್ಶಿ ಭಾಸ್ಕರ ಜಿತೂರಿ, ಕೋಶಾಧಿಕಾರಿ ಅಶೋಕ ಕಲಬುರ್ಗಿ, ಪಂಚರಾದ ನಾಗೇಂದ್ರ ಹಬೀಬ, ಎ.ಪಿ. ಪವಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net