

ಸೊರಬ: ರಕ್ತದಾನ ಮಾಡುವುದು ಶ್ರೇಷ್ಠವಾದ ಕೆಲಸ. ತುರ್ತು ಸ್ಥಿತಿಯಲ್ಲಿ ಜೀವನ್ಮರಣದ ನಡುವೆ ಹೋರಾಡುವವರಿಗೆ ರಕ್ತದ ಅವಶ್ಯಕತೆ ಇರುತ್ತದೆ ಎಂದು ಆನವಟ್ಟಿ ಪಿಎಸ್‌ಐ ರಾಜು ರೆಡ್ಡಿ ಹೇಳಿದರು.
ಗುರುವಾರ ಆನವಟ್ಟಿ ಸಮೀಪದ ಕೋಟಿಪುರದ ಎವರಾನ್ ಇಂಟರ್ ನ್ಯಾಷನಲï ರೆಸಿಡೆನ್ಸಿಯಲï ಸ್ಕೂಲïನಲ್ಲಿ ತಾಲೂಕು ಯುವಜನ ಸಂಘದಿAದ ಆಯೋಜಿಸಿದ್ದ ೫೦ನೇ ರಾಜ್ಯಮಟ್ಟದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, 18 ವರ್ಷ ಮೇಲ್ಪಟ್ಟ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ರಕ್ತಕ್ಕೆ ಪರ್ಯಾಯ ವಸ್ತು ಇಲ್ಲ. ಯುವಜನ ಸಂಘದಿAದ 50ನೇ ಬಾರಿಯ ರಕ್ತದಾನ ಶಿಬಿರ ಶ್ಲಾಘನೀಯ ಕಾರ್ಯ ಎಂದರು.
ತಾಲೂಕು ಯುವಜನ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಕಾರ್ತಿಕ್ ಸಾಹುಕಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿಯೂ ರಕ್ತದಾನದ ಬಗ್ಗೆ ಅರಿವು ಮೂಡಬೇಕು ಎನ್ನುವ ಉದ್ದೇಶದಿಂದ ಶಾಲೆಯಲ್ಲಿ ಈ ಶಿಬಿರ ಏರ್ಪಡಿಸಲಾಗಿದೆ. ರಕ್ತದಾನದಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ತಾಲೂಕು ಯುವಜನ ಸಂಘದ ಕಾರ್ಯದರ್ಶಿ ಅಭಿಲಾಷ್ ಹುರುಳಿಕೊಪ್ಪ ಮಾತನಾಡಿ, ನಾವೂ ಬದುಕಬೇಕು, ನಮ್ಮ ಸುತ್ತಲಿನವರೂ ಬದುಕಬೇಕು ಎಂಬ ಉದಾತ್ತ ಮನೋಭಾವ ಬೆಳೆಸಿಕೊಳ್ಳಬೇಕು. ವ್ಯಕ್ತಿಯು ಜೀವಿತಾವಽಯಲ್ಲಿ ಮಾಡುವ ಸತ್ಕಾರ್ಯಗಳನ್ನು ಸಮಾಜ ಸದಾ ಸ್ಮರಿಸುತ್ತದೆ ಎಂದರು.
ತಾಲೂಕು ಯುವಜನ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಆನವಟ್ಟಿ ಘಟಕದ ಅಧ್ಯಕ್ಷ ಬಸವನ ಗೌಡ, ಪ್ರಮುಖರಾದ ಮಲ್ಲಿಕಾರ್ಜುನ ದ್ವಾರಹಳ್ಳಿ, ಖಲಂದರ್ ಸಾಬï, ನಾಗರಾಜ ಹುರುಳಿಕೊಪ್ಪ, ಸಲೀಂ ಪಾಷಾ, ಮಹಾಂತೇಶ್ ಕಳ್ಳಿಕೋನೆ, ಬಸವರಾಜ್, ಚೇತನ್‌ಕುಮಾರ್, ಶಿವಕುಮಾರ್, ಶಿವಮೊಗ್ಗದ ಸಂಜೀವಿನಿ ರೆಡ್ ಕ್ರಾಸ್ ರಕ್ತನಿಽಕೇಂದ್ರದ ಧರಣೇಂದ್ರ ದಿನಕರ್, ಶಿಕ್ಷಕಿಯರಾದ ದಾಕ್ಷಾಯಣಿ, ಶರಾಪತ್, ರೇಖಾ ಇತರರಿದ್ದರು. ಶಿಬಿರದಲ್ಲಿ ಸುಮಾರು ೫೦ ಯುನಿಟ್ ರಕ್ತ ಸಂಗ್ರಹಿಸಲಾಯಿತು.