

ದೇವನಹಳ್ಳಿ : ಎಲ್ಲ ದಾನಕ್ಕಿಂತ ರಕ್ತದಾನ ಶ್ರೇಷ್ಠ. ಅಪಘಾತ ಹಾಗೂ ಇನ್ನಿತರ ತುರ್ತು ಸಂದರ್ಭದಲ್ಲಿ ಅಗತ್ಯ ಗುಂಪಿನ ರಕ್ತ ಸಿಗದೇ ಎಷ್ಟೋ ಅಮಾಯಕ ಜನ ಮೃತಟ್ಟಿದ್ದಾರೆ. ಆದ್ದರಿಂದ ಸಾವಿರಾರು ಜೀವ ಉಳಿಸಲು ದಾನಿಗಳ ರಕ್ತ ಮುಖ್ಯವಾಗಿರುತ್ತದೆ ಎಂದು ಸೀನಿಯರ್ಸ್ ಚೇಂಬರ್ ಅಧ್ಯಕ್ಷ ಎ.ಚಿನ್ನಪ್ಪ ಹೇಳಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಬೆಂಗಳೂರು ಲಯನ್ಸ್ ಬ್ಲಡ್ ಬ್ಯಾಂಕ್, ದೇವನಹಳ್ಳಿ ಲಯನ್ಸ್ ಸಂಸ್ಥೆ, ಕ್ರೀಡಾ ಮತ್ತು ಸಾಂಸತಿಕ ಸಂ ಮತ್ತು ಯುವ ಕಾಂಗ್ರೆಸ್ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ರಕ್ತದ ಬದಲಿಗೆ ಪರ್ಯಾಯ ಬೆರೆ ಏನೂ ಇಲ್ಲ. ಮನುಷ್ಯನ ರಕ್ತದ ಅವಶ್ಯಕತೆಗೆ ಮನುಷ್ಯನೇ ರಕ್ತದಾನ ಮಾಡಬೇಕು. ಆದ್ದರಿಂದ 19 ರಿಂದ 50 ವರ್ಷದೊಳಗಿನ ಆರೋಗ್ಯವಂತರು ವರ್ಷಕ್ಕೆ ಎರಡು ಬಾರಿ ರಕ್ತದಾನ ಮಾಡಬಹುದು. ರಕ್ತದಾನ ಮಾಡಿದವರಲ್ಲಿ ಕೆಲವೇ ಗಂಟೆಗಳಲ್ಲಿ ಅದೇ ಪ್ರಮಾಣದ ರಕ್ತ ಮತ್ತೆ ಉತ್ಪತ್ತಿಯಾಗುತ್ತದೆ. 90 ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದು, 40 ಯೂನಿಟ್ ರಕ್ತ ಸಂಗ್ರವಾಗಿದೆ. ಆದ್ದರಿಂದ ರಕ್ತದಾನದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದ್ದು, ದೇಶದ ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತದ ಕೊರತೆ ಕಾಣುತ್ತಿದೆ. ಅದನ್ನು ನೀಗಿಸಲು ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು ಎಂದು ಚಿನ್ನಪ್ಪ ಹೇಳಿದರು.
ಪುರಸಭೆ ನಾಮಿನಿ ಸದಸ್ಯರಾದ ಮುನಿರಾಜು, ನರ್ವೀಜ್, ಸೀನಿಯರ್ಸ್ ಛೇಂಬರ್ಸ್ ಪದಾಧಿಕಾರಿಗಳಾದ ಎಸ್.ಆರ್,ಎಸ್. ಸತೀಶ್ ಡೇವಿಡ್ ನಾರಾಯಣಸ್ವಾಮಿ, ಅರುಣ್, ಕೃಷಿಕ ಸಮಾಜದ ನಿದೇರ್ಶಕರಾದ ದಿನಕರ್, ರಾಜಣ್ಣ, ಲಯನ್ಸ್ ಬ್ಲಡ್ಬ್ಯಾಂಕ್ ಪೋಗ್ರಾಮರ್ ದೀಪಕ್ ಸುಮನ್, ಯುವ ಕಾಂಗ್ರೆಸ್ ಅಧ್ಯಕ್ಷ ಸಾಗರ್ ಇದ್ದರು.