ರಕ್ತದಾನ ಮಾಡುವುದು ಪುಣ್ಯದ ಕಾರ್ಯ

31GKK3
Published on

ಗೋಕಾಕ: ಜೀವ ಉಳಿಸುವ ರಕ್ತದಾನದಂತಹ ಪುಣ್ಯ ಕಾರ್ಯದಲ್ಲಿ ಜನತೆ ಹೆಚ್ಚೆಚ್ಚು ಪಾಲ್ಗೊಳ್ಳಬೇಕು ಎಂದು ಕೆಎಲ್​ಇ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.

ತಾಲೂಕಿನ ಮರಡಿ ಶಿವಾಪುರ ಗ್ರಾಮದಲ್ಲಿ ರೋಟರಿ ಸೇವಾ ಸಂ ಮತ್ತು ರೋಟರಿ ಸಂಸ್ಥೆ ಈಚೆಗೆ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ. ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಅದನ್ನು ದಾನಿಗಳಿಂದಲೇ ಪಡೆಯಬೇಕು. ಇಂತಹ ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಂಡು ಪುಣ್ಯವಂತರಾಗಬೇಕು ಎಂದರು.

52ಕ್ಕೂ ಹೆಚ್ಚು ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಮುಖಂಡರಾದ ಮಲ್ಲಿಕಾರ್ಜುನ ಕಲ್ಲೋಳಿ, ಸೋಮಶೇಖರ ಮಗದುಮ, ಈಶ್ವರ ಶೀಗಿಹಳ್ಳಿ, ಡಾ.ಸಿದ್ದಣ್ಣ ಕಮತ, ಪ್ರಕಾಶ ವರದಾಯಿ, ಬಸವರಾಜ ಹುಳ್ಳೇರ, ಪರಮೇಶ್ವರ ಗುಲ್ಲ, ಸಚಿನ ಜಾಧವ, ರಾಜು ಮುನ್ನೋಳಿಮಠ, ಮಲ್ಲಪ್ಪ ಖಡಕಬಾವಿ, ಮಲ್ಲಪ್ಪ ಈಟಿ, ಚನ್ನಪ್ಪ ಗುದಗನವರ, ಕೀರಪ್ಪ ಗುದಗನವರ, ಸುರೇಶ ಶೀಗಿಹಳ್ಳಿ, ಅಪ್ಪಣ್ಣಾ ಗುದಗನವರ, ದುಂಡಪ್ಪ ಕೊಳವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net