

ಲಿಂಗದಹಳ್ಳಿ: ತಣಿಗೆಬೈಲು ಶ್ರೀಚೌಡೇಶ್ವರಿ ಪ್ರೌಢ ಶಾಲೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು, ದೇಶ ವಿದೇಶಗಳಲ್ಲಿ ಉನ್ನತ ಸ್ಥಾನದಲ್ಲಿರುವುದಕ್ಕೆ ಶಾಲಾ ಆಡಳಿತ ವರ್ಗ, ಶಿಕ್ಷಕರ ಮಾರ್ಗದರ್ಶನ ಕಾರಣವಾಗಿದ್ದು, ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು ಮರೆಯದೇ ಶಾಲೆಗೆ ಸಾಧ್ಯವಾಗುವ ಕಲಿಕಾ ಪರಿಕರಗಳನ್ನು ನೀಡಿದರೆ ಮುಂದೆ ಕಲಿಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ತಣಿಗೆಬೈಲು ರಮೇಶ್ ಗೋವಿಂದೇಗೌಡ ಹೇಳಿದರು.
ತಣಿಗೆಬೈಲು ಶ್ರೀ ಪ್ರೌಢಶಾಲಾ ಆವರಣದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ವಿದ್ಯಾರ್ಥಿಗಳ ಕಲಿಕೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅಕ್ಷರ ದಾಸೋಹ, ಬೈಸಿಕಲ್ ವಿತರಣೆ, ಮೊಟ್ಟೆ ವಿತರಣೆ, ಶೂ ಸಾಕ್ಸ್ ಮತ್ತು ಉಚಿತ ಪಠ್ಯ ಪುಸ್ತಕಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳ ಇವುಗಳ ಸದುಪಯೋಗ ಪಡೆದುಕೊಂದು ಶಾಲೆಗೆ ಉತ್ತಮ ಫಲಿತಾಂಶ ತರುವ ಮುಲಕ ಕಲಿತಾ ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತರಬೇಕು ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುಟ್ಟೇಗೌಡ, ಮುಖ್ಯಶಿಕ್ಷಕ ಎಲ್.ಸಿ ಕುಮಾರ್, ಸಹ ಶಿಕ್ಷಕ ನಾಗರಾಜನಾಯ್ಕ, ಓಂಕಾರಪ್ಪ, ಪಾರ್ವತಮ್ಮ, ಹಿರಿಯ ಪ್ರಾಥಮಿಕ ಶಾಲೆಮುಖ್ಯಶಿಕ್ಷಕ ಜಯಣ್ಣ ಇದ್ದರು.