ಸಮುದಾಯಭವನಕ್ಕೆ ಭೂಮಿ ನೀಡಿ

18 09 205_BNG_RURAL_PAGE_3
ಹೊಸಕೋಟೆ ತಾಲೂಕು ಕಚೇರಿಯಲ್ಲಿ ವಿಶ್ವಕರ್ಮ ಮಹರ್ಷಿ ಭಾವಚಿತ್ರಕ್ಕೆ ಶಾಸಕ ಶರತ್​ ಬಚ್ಚೇಗೌಡ ಪುಷ್ಪನಮನ ಸಲ್ಲಿಸಿದರು. ಟಿಎಪಿಸಿಎಂಎಸ್​ ನಿರ್ದೇಶಕ ಆನಂದಾಚಾರಿ, ತಾಲೂಕು ವಿಶ್ವಕರ್ಮ ಸಂದ ಅಧ್ಯಕ್ಷ ಸುರೇಶ್​, ಮಹಿಳಾ ಟಕದ ಆಧ್ಯೆ ಗೋವಿಂದಮ್ಮ, ಎ.ಶಂಕರಾಚಾರಿ, ಶಂಕರಚಾರಿ, ಎಲ್​ಐಸಿ ಶಂಕರಾಚಾರಿ, ಮುನಿಶಾಮಾಚಾರಿ, ರಾಜಗೋಪಾಲ್​, ಭದ್ರಾಚಾರಿ, ಶಿರಸ್ತಿದಾರ್​ ರಾಜೂಗೌಡ ಇದ್ದರು.
Published on

ಹೊಸಕೋಟೆ: ವಿಶ್ವಕರ್ಮ ಸಮುದಾಯದವರು ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸುವಂತೆ ಮನವಿ ಮಾಡಿದ್ದಾರೆ. ನಗರದ ಹೊರವಲಯದಲ್ಲಿ ಜಮೀನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಶಾಸಕ ಶರತ್​ ಬಚ್ಚೇಗೌಡ ಹೇಳಿದರು.

ತಾಲೂಕು ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಯಂತಿಯಲ್ಲಿ ಮಾತನಾಡಿದರು. ವಿಶ್ವ ಕರ್ಮ ಜನಾಂಗದಲ್ಲಿ ಜನಿವಾರ ಬಳಕೆ ಮಾಡುವುದರಿಂದ ಮುಂದುವರೆದ ಸಮಾಜ ಎಂಬ ಭಾವನೆ ಎಲ್ಲರಲ್ಲಿದೆ, ಆದರೆ ಆ ಸಮುದಾಯದಲ್ಲೂ ಆರ್ಥಿಕ ಸಾಮಾಜಿಕ ಹಾಗೂ ರಾಜಕೀಯವಾಗಿಯೂ ಹಿಂದುಳಿದವರಿದ್ದಾರೆ, ಮಾಜಿ ಸಂಸದ ಬಿ.ಎನ್​ ಬಚ್ಚೇಗೌಡರ ಕಾಲದಿದಲೂ ವಿಶ್ವಕರ್ಮ ಜನಾಂಗದವರಿಗೆ ಬಹಳಷ್ಟು ಅವಕಾಶಗಳನ್ನು ನೀಡಿತ್ತಾ ಬಂದಿದ್ದು ಈಗಲೂ ನಾವು ವಿಶ್ವಕರ್ಮ ಜನಾಂಗಕ್ಕೆ ಅವಶ್ಯವಾದ ಎಲ್ಲ ಸಹಕಾರ ನೀಡಲಿದ್ದೇನೆ ಎಂದರು. ತಾಲೂಕು ಸಮುದಾಯದವರು ವಿಶ್ವಕರ್ಮ ಪುತ್ಥಳಿ ನಿರ್ಮಾಣಕ್ಕೆ ನಗರದ ಉದ್ಯಾನವನದಲ್ಲಿ ಅವಕಾಶ ನೀಡಲು ಮನವಿ ಮಾಡಿದ್ದಾರೆ. ಈ ಬಗ್ಗೆ ಬಗ್ಗೆ ನಗರಾಯುಕ್ತರ ಬಳಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಎಸ್ಸೆಸ್ಸೆಲ್ಸಿ ಹಾಗೂ ದ್ವೀತಿಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net