ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ

19 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. ಇದರಿಂದ ಒಂದು ಜೀವ ಉಳಿಸುವುದರ ಜತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ವೈದ್ಯ ಡಾ. ಮಕದುಮ್​ ಕಿಲ್ಲೇದಾರ ಹೇಳಿದರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಕಾಲೇಜಿನಲ್ಲಿ ಇನ್​ ಸಿಗ್ನಿಯಾ-&2024 ರಾಷ್ಟ್ರಮಟ್ಟದ ತಾಂತ್ರಿಕ ಮತ್ತು ಸಾಂಸತಿಕ ಮೇಳದ ನಿಮಿತ್ತ ಗುರುವಾರ ಎಸ್​ಡಿಎಂ ವೈದ್ಯಕಿಯ ಕಾಲೇಜು ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಜನಸಂಖ್ಯೆಯ ಶೇ. 55&60ರಷ್ಟು ಜನರು ರಕ್ತದಾನಕ್ಕೆ ಅರ್ಹರು. ಇದರಲ್ಲಿ ಕೇವಲ ಶೇ. 2ರಷ್ಟು ಜನರು ರಕ್ತದಾನ ಮಾಡುತ್ತಾರೆ. ಈ ಸಂಖ್ಯೆಯನ್ನು ಶೇ. 25&30ಕ್ಕೆ ಹೆಚ್ಚಿಸುವ ಅಗತ್ಯವಿದೆ. ಆ ಗುರಿ ಸಾಧನೆಗೆ ಇಂತಹ ರಕ್ತದಾನ ಶಿಬಿರ ಸಹಾಯ ಮಾಡುತ್ತವೆ ಎಂದರು.
ಪ್ರಭಾರಿ ಪ್ರಾಂಶುಪಾಲ ಡಾ. ವಿಜಯಾ ಸಿ. ಮಾತನಾಡಿ, ರಕ್ತದಾನ ಮಹಾದಾನ. ರಕ್ತದಾನದಿಂದ ಯಾವುದೇ ತೊಂದರೆ ಇಲ್ಲ. ಯುವ ಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. ರಕ್ತದಾನದಿಂದ ಹೃದಯ ಸಂಬಂಧಿ ಕಾಯಿಲೆ ತಡೆಯಬಹುದು ಎಂದರು.
ಉಪ ವೈದ್ಯಕಿಯ ಅಧೀಕ್ಷಕ ಡಾ. ಪ್ರಭು ಶಿಬಿರಕ್ಕೆ ಚಾಲನೆ ನೀಡಿದರು. ಎಸ್​ಡಿಎಂ ಸಿಇಟಿ ಕಾರ್ಯದಶಿರ್ ಜೀವಂಧರ ಕುಮಾರ ಅಧ್ಯಕ್ಷತೆ ವಹಿಸಿದ್ದರು. 200ಕ್ಕೂ ಹೆಚ್ಚು ವಿದ್ಯಾಥಿರ್ಗಳು, ಸಿಬ್ಬಂದಿ ರಕ್ತದಾನ ಮಾಡಿದರು.
ಪ್ರೊ. ವಿ.ಕೆ. ಪರ್ವತಿ, ಪ್ರೊ. ಆನಂದ ವೈದ್ಯ, ಡಾ. ರಾಜಶೇಖರಪ್ಪ, ತೇಜಸ್ವಿ ತಿಮಸಾನಿ, ಪ್ರೊ. ಗೋವಿಂದ ನೆಗಳೂರ, ಡಾ. ರಾಮಚಂದ್ರನಾಯಕ ಯಾದವಾಡ, ಪ್ರೊ. ಸಮೀರ ಚಿಟ್ನೀಸ್​, ಪ್ರೊ. ಶಶಿಕಾಂತ ಶಿರಕೋಳ, ಪ್ರೊ. ಕಿರಣ ರಾಠೋಡ, ಪ್ರೊ.ಮಹಾಂತೇಶ ಮರೀಕಟ್ಟಿ, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾಥಿರ್ಗಳು, ಇತರರು ಇದ್ದರು.
ಪ್ರೊ. ರಶ್ಮಿ ಪಾಟೀಲ ಸ್ವಾಗತಿಸಿದರು. ಗವಿಸಿದ್ದೇಶ ಮಜ್ಜಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net