

ಮುಂಡರಗಿ: ರಕ್ತದ ಅಗತ್ಯತೆ ಇರುವವರಿಗೆ ರಕ್ತ ಕೊಟ್ಟು ಜೀವ ಉಳಿಸಿಕೊಡುವ ಕಾರ್ಯ ಆಗಬೇಕು. ರಕ್ತಕ್ಕೆ ಯಾವುದೆ ಜಾತಿ ಇಲ್ಲ, ಮಾನವೀಯತೆ ಸೇವೆ ತುಂಬಾ ಮುಖ್ಯ ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಅನುಭಾವಿಗಳ ಅನುಭಾವ ದರ್ಶನ ಪ್ರವಚನ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಜನರ ಆರೋಗ್ಯ ಸದೃಢಕ್ಕೆ ಇಂತಹ ಶಿಬಿರಗಳು ಅವಶ್ಯವಾಗಿ ಆಯೋಜಿಸಬೇಕು. ಮನುಷ್ಯ ರಕ್ತದಾನ ಮೂಲಕ ಆರೋಗ್ಯ ಸೇವೆ ಸಲ್ಲಿಸಬೇಕು. ದೇಹದ ಅಂಗಾಂಗ ದಾನ ಮಾಡುವಂತದ್ದು ದೊಡ್ಡ ಕಾರ್ಯ. ಹಲವೆಡೆ ಡೆಂಘೆ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ರಕ್ತದ ಕೊರತೆ ಇದ್ದು, ಪ್ರತಿಯೊಬ್ಬರೂ ರಕ್ತದಾನದಂತಹ ಶಿಬಿರಗಳಲ್ಲಿ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಆರೋಗ್ಯ ವೃದ್ಧಿಗೆ ಸಹಕಾರಿಯಾಗಬೇಕು ಎಂದರು.
ಜಗದ್ಗುರು ತೋಂಟದಾರ್ಯ ಸೇವಾ ಸಮಿತಿ ಅಧ್ಯಕ್ಷ ಎಚ್. ವಿರೂಪಾಕ್ಷಗೌಡ್ರ, ಪ್ರವಚನ ಸಮಿತಿ ಅಧ್ಯಕ್ಷ ಎಸ್.ಎಸ್. ಗಡ್ಡದ, ಪ್ರಧಾನ ಕಾರ್ಯದರ್ಶಿ ಅಡಿವೆಪ್ಪ ಚಲವಾದಿ, ಪವನ ಚೋಪ್ರಾ, ದೇವು ಹಡಪದ, ಶಿವು ವಾಲಿಕಾರ, ಸದಾಶಿವಯ್ಯ ಕಬ್ಬೂರಮಠ, ಶರಣು ಈಳಿಗೇರ, ಅನಿಲಕುಮಾರ ಹಂದ್ರಾಳ, ಲಕ್ಷ್ಮಣ, ಸರೋಜಾ ಪತ್ತಾರ, ಅನಿಲ್ ಇತರರಿದ್ದರು.