ರಕ್ತದಾನ ಮಾಡಿ ಜೀವ ಉಳಿಸಬೇಕು

web2
ತಲ್ಲೂರ ಗ್ರಾಮದಲ್ಲಿ ಏರ್ಪಡಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ವಿನಯ ಕುಮಾರ ದೇಸಾಯಿ, ಕವಿತಾ ಬಾಲರಡ್ಡಿ, ಎಚ್.ಕೆ.ಚೌರಡ್ಡಿ, ಮಲ್ಲಪ್ಪ ಬಸಿಡೋಣಿ ಇತರರಿದ್ದರು.
Published on

ತಲ್ಲೂರ: ರಕ್ತದಾನ ಮಾಡುವ ಮೂಲಕ ಜೀವ ಉಳಿಸಿ, ಮತ್ತೊಬ್ಬರ ಬಾಳಿಗೆ ಬೆಳಕಾಗಬೇಕು ಎಂದು ಸವದತ್ತಿ ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ ಹೇಳಿದರು.

ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸವದತ್ತಿ ತಾಪಂ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಪಂ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯರಗಟ್ಟಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್.ಗಂಜಿ, ಮುಖ್ಯ ಶಿಕ್ಷಕ ಡಿ.ಡಿ.ಭೋವಿ, ನಿವೃತ್ತ ಮುಖ್ಯ ಶಿಕ್ಷಕ ಎ.ವಿ.ಇಂಗಳೆ, ಕಾರ್ಯದರ್ಶಿ ಸತೀಶ ಬಡಿಗೇರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕವಿತಾ ಬಾಲರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಎಚ್.ಕೆ.ಚೌರಡ್ಡಿ, ಸದಸ್ಯ ಸಚಿನ ಹೋಳಿ, ಮಲ್ಲಪ್ಪ ಬಸಿಡೋಣಿ, ಶಶಿಧರ

ತಳವಾರ, ಶಟ್ಟೆಪ್ಪ ಮಾದರ, ಶಂಕರಗೌಡ ಪಾಟೀಲ, ನೀಲಕಂಠ ಶಿವಪೂಜಿ, ಶಿವನಗೌಡ ನಾಯ್ಕರ, ಸುಭಾನಿ ಕುದರಿ, ರಾಜಶೇಖರ ಅಣ್ಣಿಗೇರಿ, ಡಾ.ಪ್ರಮೋದ ಸಿಂದಗಿ, ಆರೋಗ್ಯ ನಿರೀಕ್ಷಣಾಧಿಕಾರಿ ಹನಮಂತ ಪಚ್ಚಿನವರ, ಎಸ್.ಎಸ್.ಉಪ್ಪಿನ, ಆರತಿ ಹೊಳ್ಳಿಕೇರಿ, ಜಿ.ಪಿ.ಹೊಂಗಲ, ಎಸ್.ಎಫ್.ಚೆನ್ನಮೇತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net