ರಕ್ತದಾನ ಮಾಡಿ ಜೀವ ಉಳಿಸಿ

Donate blood and save lives.
Published on

ಮುಧೋಳ:ರಕ್ತದಾನದಿಂದ ದಾನಿಯ ಆರೋಗ್ಯವೂ ಸುಧಾರಿಸುವುದಲ್ಲದೇ, ಹಲವು ಜೀವಗಳೂ ಉಳಿಯುತ್ತದೆ ಎಂದು ಯುವ ಮುಖಂಡ ಅರುಣ ಕಾರಜೋಳ ಹೇಳಿದರು.ನಗರದ ಹೌಸಿಂಗ್​ ಕಾಲನಿಯಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲ, ವೀರಭದ್ರೇಶ್ವರ ರಕ್ತ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದ ನಿಮಿತ್ತ ಯುವ ಸಮುದಾಯ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.

ನಗರಸಭೆ ಸದಸ್ಯರಾದ ಗುರುಪಾದ ಕುಳಲಿ, ಕುಮಾರ ಪಮ್ಮರ, ನಗರಸಭೆ ಮಾಜಿ ಅಧ್ಯ ಗುರುಪಾದ ಕುಳಲಿ, ಬಿಜೆಪಿ ಗ್ರಾಮೀಣ ಟಕದ ಮಾಜಿ ಅಧ್ಯ ಕೆ.ಆರ್​. ಮಾಚಪ್ಪನವರ, ಡಾ. ರವಿ ನಂದಗಾಂವ. ಶ್ರೀಶೈಲ ಚಿನ್ನನವರ, ಮಂಜು ಮಾನೆ, ಸುನೀಲ ನಿಂಬಾಳಕರ, ಪ್ರದಿಪ ನಿಂಬಾಳಕರ, ಅನೂಪ ಸಿಂಧೆ, ಮಹಮ್ಮದ ಶೇಖ, ಪ್ರವಿಣ ಸಿಂಧೆ ಇತರರಿದ್ದರು.

* ಚಿತ್ರ ರ್ಶಿಷಿಕೆ: ಎಂಡಿಎಲ್​&6&1

ಮುಧೋಳ ನಗರದ ಹೌಸಿಂಗ್​ ಕಾಲನಿಯಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಯುವ ಮುಖಂಡ ಅರುಣ ಕಾರಜೋಳ, ನಗರಸಭೆ ಸದಸ್ಯರಾದ ಗುರುಪಾದ ಕುಳಲಿ, ಕುಮಾರ ಪಮ್ಮರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net