ರಕ್ತದಾನ ಮಾಡಿ ಜೀವ ಉಳಿಸಿ

21SND-04
ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಅಮೋಘ ಸಿದ್ಧೇಶ್ವರ ಮಠದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮೇರಿ ಭಂಡಾರಿ, ಆಯುಷ್ ವೈದ್ಯರಾದ ವಿರೂಪಾಕ್ಷಪ್ಪ, ಗಂಗಾಧರಯ್ಯ ಗುರುವಿನ್, ದಂತವೈದ್ಯ ರಮೇಶ ಕರಡೋಣಿ ಇತರರಿದ್ದರು.
Published on

ಸಿಂಧನೂರು: ವಿಜ್ಞಾನ ಎಷ್ಟೇ ಮುಂದುವರಿದರೂ ರಕ್ತ ತಯಾರು ಮಾಡಲು ಸಾಧ್ಯವಿಲ್ಲ. ಹಾಗಾಗಿ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಿ ರೋಗಿಗಳನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಅಮೋಘ ಸಿದ್ಧೇಶ್ವರ ಮಠದ ಮಾದಯ್ಯ ಗುರುವಿನ್ ಹೇಳಿದರು.

ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ಅಮೋಘ ಸಿದ್ಧೇಶ್ವರ ಮಠದಲ್ಲಿ ಆಧ್ಯಾತ್ಮಿಕ ಚಿಂತನೆ ಮತ್ತು ಸಂತರ ಸಮಾವೇಶದ ಕಾರ್ಯಕ್ರಮದ ಅಂಗವಾಗಿ ಗುರುವಾರ ಶಕ್ತಿ ರಕ್ತ ಭಂಡಾರ ಹಾಗೂ ಅನ್ನದಾನೇಶ್ವರ ಸ್ವಯಂಪ್ರೇರಿತ ರಕ್ತ ಕೇಂದ್ರದಿಂದ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

18 ವರ್ಷ ಮೇಲ್ಪಟ್ಟ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡಬೇಕು. ಒಬ್ಬರ ರಕ್ತದಾನದಿಂದ ಮೂವರ ಜೀವ ಉಳಿಸಿದಂತಾಗುತ್ತದೆ. ಆದ್ದರಿಂದ ಶ್ರೀಮಠದ ಭಕ್ತರು ಇಂಥಹ ಪರೋಪಕಾರದ ಕಾರ್ಯದಲ್ಲಿ ಭಾಗಿಯಾಗಲಿ ಎಂದರು. ಪಪಂ ಸದಸ್ಯ ಬಾಪುಗೌಡ ದೇವರಮನಿ ಮಾತನಾಡಿ, ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸುವುದು ಶ್ರೇಷ್ಠ ಕಾರ್ಯ ಎಂದರು.

ಶಿಬಿರದಲ್ಲಿ 65ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.

ಪ್ರಮುಖರಾದ ಶೇಖರಗೌಡ ದೇವರಮನಿ, ಸಿದ್ದೇಶ್ವರ ಗುರಿಕಾರ, ಶರಣಬಸವ ರಡ್ಡೇರ, ಶರಣಬಸವ ಗಡೇದ್, ಯಂಕೋಬಯ್ಯ ಶ್ರೇಷ್ಠಿ, ಶಿವಯ್ಯ ಗುರುವಿನ್, ಫಕೀರಪ್ಪ ಭಂಗಿ, ಅಭಿಷೇಕಗೌಡ, ಮಹಮ್ಮದ್ ಉಸ್ಮಾನ್ ಚೌದ್ರಿ, ಅರವಿಂದ ರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net