ರಕ್ತದಾನ ಮಾಡಿ ಜೀವ ಉಳಿಸಿ

gld 15-2 rakta
ಗುಳೇದಗುಡ್ಡದ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಶ್ರೀಗುರುಬಸವ ದೇವರು ರಕ್ತದಾನ ಮಾಡಿದರು.
Published on

ಗುಳೇದಗುಡ್ಡ: ರಕ್ತದಾನ ಮಾಡಿ ಜೀವ ಉಳಿಸಲು ಪ್ರಯತ್ನಿಸಬೇಕು ಎಂದು ಜಗದ್ಗುರು ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಜಗದ್ಗುರು ಗುರುಸಿದ್ದ ಪಟ್ಟದಾರ್ಯ ಶ್ರೀಗಳ 39ನೇ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ರಕ್ತದಾನ ಮಾಡುವುದು ಪ್ರತಿ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ ಆಗಾಗ ರಕ್ತದಾನ ಮಾಡಿ ಜೀವ ಉಳಿಸುವ ಪುಣ್ಯ ಕಟ್ಟಿಕೊಳ್ಳಬೇಕು ಎಂದರು.

ಪ್ರತಿಯೊಬ್ಬ ವ್ಯಕ್ತಿ ಆರೋಗ್ಯದಿಂದ ಇರಬೇಕಾದರೆ ವರ್ಷದಲ್ಲಿ ಕನಿಷ್ಠ ಎರಡು ಬಾರಿಯಾದರೂ ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ಒತ್ತಡ, ಹೃದಯ ತೊಂದರೆ, ಪಾರ್ಶ್ವವಾಯು, ಇತರ ಗಂಭೀರ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ಜಗದ್ಗುರು ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಹೇಳಿದರು.

ಗುರುಬಸವ ದೇವರು, ಡಾ.ಚಂದ್ರಕಾಂತ ಜವಳಿ, ಡಾ.ಪರಗಿ, ಡಾ.ಬಸವರಾಜ ಬಂಟನೂರ, ಡಾ.ರಾಘು ಸಾರಂಗಿ, ರಾಜು ಜವಳಿ, ಶಿವಕುಮಾರ ಕರನಂದಿ, ಭಾಗ್ಯಾ ಉದ್ನೂರ, ಸಂಸ್ಥೆ ಚೇರಮನ್ ರಾಜು ಜವಳಿ, ಗೌರಮ್ಮ ಕಲಬುರ್ಗಿ, ಪತ್ರಕರ್ತ ಮಲ್ಲಿಕಾರ್ಜುನ ರಾಜನಾಳ, ಪ್ರಕಾಶ ರೋಜಿ, ಆನಂದ ತಿಪ್ಪಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net