ರಕ್ತದಾನ ಮಾಡಿ ಮತ್ತೊಬ್ಬರ ಜೀವ ಉಳಿಸಿ

DONATE
Published on

ಕುಂದಗೋಳ: ವಿಶ್ವ ಸಾಮಾಜಿಕ ದಿನಾಚರಣೆ ಅಂಗವಾಗಿ ಪಟ್ಟಣದ ಜೆಎಂಎಫ್‌ಸಿ ಹಿರಿಯ ಹಾಗೂ ಕಿರಿಯ ನ್ಯಾಯಾಲಯದ ಆವರಣದಲ್ಲಿ ಗುರುವಾರ ರಕ್ತದಾನ ಶಿಬಿರ ಜರುಗಿತು.

ಹಿರಿಯ ದಿವಾಣಿ ನ್ಯಾಯಾಧೀಶ ಅಬ್ದುಲ್ ಖಾದರ್ ಮಾತನಾಡಿ, ‘ಎಲ್ಲ ದಾನಕ್ಕಿಂತ ರಕ್ತದಾನ ಮಹಾಶ್ರೇಷ್ಠವಾದ ದಾನವಾಗಿದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸುವ ಕಾರ್ಯ ಮಾಡಬೇಕು’ ಎಂದರು.

ವಕೀಲರ ಸಂಘದ ಅಧ್ಯಕ್ಷ ಬಿ.ಪಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಿರಿಯ ನ್ಯಾಯಾಲಯದ ನ್ಯಾಯಾಧೀಶೆ ಗಾಯಿತ್ರಿ, ಸರ್ಕಾರಿ ಅಭಿಯೋಜಕಿ ಚಂದ್ರಕಲಾ ಪ್ರಭಾಕರ, ವಕೀಲರ ಸಂಘದ ಕಾರ್ಯದರ್ಶಿ ವೈ.ಬಿ. ಬೆಳೆಬಾಳ, ಸಹಾಯಕ ಸರ್ಕಾರಿ ಅಭಿಯೋಜಕಿ ಗೀತಾ ಜಿ. ಉಪಸ್ಥಿತರಿದ್ದರು.

ಎಚ್.ಎ. ತಿರುಕನ್ನವರ ಉಪನ್ಯಾಸ ನೀಡಿದರು. ಜಯಶ್ರೀ ಮುದೇನವರ, ವಕೀಲರಾದ ಮುತ್ತುರಾಜ ತಹಶೀಲ್ದಾರ, ಅಶೋಕ ಕ್ಯಾರಕಟ್ಟಿ, ಎಂ.ಎಂ. ಗೂಡ್ವಾಲ, ನಾರಾಯಣ ಹಂಚಾಟಿ, ಜಿ.ಬಿ. ಸ್ವರೂಟೂರ, ಪ್ರಶಾಂತ ಪಾಟೀಲ, ಎಂ.ಎಂ. ಮೀಯಾನವರ, ಅಶ್ವಿನಿ ಕ್ಯಾರಕಟ್ಟಿ, ಅಶೋಕ ಘೋರ್ಪಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net