ರಕ್ತದಾನ ಮಾಡಿ ಜೀವ ಉಳಿಸಲು ಕೈಜೋಡಿಸಿ

7sgr3
ಸಾಗರದ ಶ್ರೀಮತಿ ಇಂದಿರಾಗಾAಽ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡವರಿಗೆ ಪ್ರಮಾಣ ಪತ್ರ ನೀಡಲಾಯಿತು. ಡಾ.ಬಿ.ಜಿ.ಸಂಗಮ್, ಡಾ. ರಾಜನಂದಿನಿ, ಸುನೀಲ್, ಹರೀಶ್, ಚಂದ್ರಶೇಖರ್, ಶಿವಾನಂದ ಇತರರಿದ್ದರು.
Published on

ಸಾಗರ: ರಕ್ತದಾನ ಮಾಡುವುದರಿಂದ ಅಮೂಲ್ಯವಾದ ಜೀವವನ್ನು ಉಳಿಸಲು ಸಾಧ್ಯ. ಯುವಜನರು ರಕ್ತದಾನ ಶಿಬಿರದಲ್ಲಿ ಹೆಚ್ಚಾಗಿ ಪಾಲ್ಗೊಂಡು ಸಹಕಾರ ನೀಡಬೇಕು ಎಂದು ರೋಟರಿ ರಕ್ತನಿಽ ಕೇಂದ್ರದ ವೈದ್ಯ ಡಾ.ಬಿ.ಜಿ.ಸಂಗಮ್ ಹೇಳಿದರು.

ಸಹಕಾರ ನೀಡಬೇಕು ಎಂದು ರೋಟರಿ ರಕ್ತನಿಽ ಕೇಂದ್ರದ ವೈದ್ಯ ಡಾ.ಬಿ.ಜಿ.ಸಂಗಮ್ ಹೇಳಿದರು.
ಗುರುವಾರ ನಗರದ ಶ್ರೀಮತಿ ಇಂದಿರಾಗಾAಽ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್, ಎನ್‌ಸಿಸಿ, ಎನ್‌ಎಸ್‌ಎಸ್, ರೇಂರ‍್ಸ್, ಕ್ರೀಡಾ ವಿಭಾಗ ಮತ್ತು ರೋಟರಿ ರೆಡ್‌ಕ್ರಾಸ್ ರಕ್ತನಿಽ ಕೇಂದ್ರದಿAದ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರೋಟರಿ ರಕ್ತನಿಽ ಕೇಂದ್ರದ ಗೌರವಾಧ್ಯಕ್ಷೆ ಡಾ. ರಾಜನಂದಿನಿ ಮಾತನಾಡಿ, ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತ ನೀಡಿದರೆ ಯಾವುದೇ ಸಮಸ್ಯೆ ಬರುವುದಿಲ್ಲ. ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ಆರೋಗ್ಯ ಇನ್ನಷ್ಟು ಚೆನ್ನಾಗಿರುತ್ತದೆ. ಆರೋಗ್ಯವಂತ ವ್ಯಕ್ತಿಯಲ್ಲಿ ೫ ರಿಂದ 6 ಲೀಟರ್ ರಕ್ತವಿರುತ್ತದೆ. ರಕ್ತದಾನ ಮಾಡಿದರೆ ಆರೋಗ್ಯ ಹದಗೆಡುತ್ತದೆ ಎಂಬ ಭಯ ಬೇಡ ಎಂದರು.
ಕಾರ್ಯಕ್ರಮದಲ್ಲಿ ಸುನೀಲ್, ಹರೀಶ್, ವಿನೋದ ಕುಮಾರ್, ಪ್ರೊ. ಚಂದ್ರಶೇಖರ್, ಡಾ. ಶಿವಾನಂದ ಎಸ್.ಭಟ್, ಪ್ರೊ. ಎಂ.ಜಿ.ರAಗಣ್ಣನವರ್, ಡಾ. ದೀಪಾ, ಪ್ರೊ. ಎಚ್.ಲೋಕೇಶಪ್ಪ, ಪ್ರೊ. ಅರ್ಪಿತಾ ಪಾಟೀಲ್, ಡಾ. ಕೆ.ಆರ್.ಪ್ರತಿಭಾ, ಪ್ರೊ. ಸೀಮಾ ಕೌಸರ್, ಪ್ರೊ. ಬಿ.ಎನ್. ಸೌಮ್ಯಾ, ಪ್ರೊ. ಬಿ.ಎಲ್.ರಾಜು, ಸುಪ್ರಿತಾ, ರಶ್ಮಿತಾ, ಪ್ರೀತಿ, ಸಾನ್ವಿಕಾ ಇತರರಿದ್ದರು. ಶಿಬಿರದಲ್ಲಿ ಒಟ್ಟು ೪೮ ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net