ರಕ್ತದಾನ ಮಾಡಿ ಜೀವ ಉಳಿಸಲು ನೆರವಾಗಿ

19 lxr 4- blood donate
Published on

ಲಕ್ಷ್ಮೇಶ್ವರ: ಜನರ ಜೀವ ರಕ್ಷಣೆಗೆ ರಕ್ತ ಅತ್ಯವಶ್ಯಕವಾಗಿದ್ದು, ರಕ್ತದ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ರಕ್ತದಾನ ಮಾಡುವ ಮೂಲಕ ಎಲ್ಲರೂ ಮತ್ತೊಬ್ಬರ ಜೀವ ರಕ್ಷಣೆಗೆ ಮುಂದಾಗಬೇಕು ಎಂದು ಕುರುಬ ಸಮಾಜದ ತಾಲೂಕು ಅಧ್ಯಕ್ಷ ಶೇಖಣ್ಣ ಕಾಳೆ ಅಭಿಪ್ರಾಯಪಟ್ಟರು.


ಅವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ಜಿಲ್ಲಾ ಹಾಗೂ ತಾಲೂಕು ಘಟಕದಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 227ನೇ ಜಯಂತ್ಯುತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ದೇಶಿಸಿ ಮಾತನಾಡಿದರು.


ಮುಖಂಡ ತಿಪಣ್ಣ ಸಂಶಿ ಮಾತನಾಡಿ, ರಕ್ತವನ್ನು ಎಲ್ಲರೂ ನೀಡಬಹುದಾಗಿದೆ. ಇದೊಂದು ಸಮಾಜಮುಖಿ ಕಾರ್ಯಕ್ರಮ ಎನ್ನುವ ನಿಟ್ಟಿನಲ್ಲಿ ರಕ್ತದಾನ ಮಾಡಿ, ಸಮಾಜ ಸೇವೆಗೆ ಮಾದರಿಯಾಗಬೇಕು ಎಂದರು.


ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ಕೇಂದ್ರ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು.


ಡಾ ಶ್ವೇತಾ ಪಾಟೀಲ ನೇತೃತ್ವ ವಹಿಸಿದ್ದರು. ಶಿಬಿರದಲ್ಲಿ ಅನೇಕ ಯುವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಹನುಮಂತ ಶೇರಸೂರಿ, ನಿಂಗಪ್ಪ ಬನ್ನಿ, ಅಣ್ಣಪ್ಪ ರಾಮಗಿರಿ, ನಾಗರಾಜ ಮಡಿವಾಳರ, ಮಂಜುನಾಥ ಹೊಗೆಸೊಪ್ಪಿನ, ಶಿವಯೋಗಿ ಗಡ್ಡದೇವರಮಠ, ಮಂಜುನಾಥ ಶೇರಸೂರಿ, ಹರೀಶ ಲಕ್ಷ್ಮೇಶ್ವರ, ನಾರಾಯಣಸಾ ಪವಾರ, ಅಮರಪ್ಪ ಗುಡಗುಂಟಿ, ರಮೇಶ ಲಮಾಣಿ ಸಂತೋಷ ರಾಠೋಡ, ಪ್ರಕಾಶ ಗೌಡ ನಾಯ್ಕರ, ಮಾಂತೇಶ ಗದ್ದಿ, ರೋಹನ್ ಕಡ್ಡಿಪೂಜಾರ, ಚೇತನ ಹೊಳಲಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net