

ನರಗುಂದ: ಪಟ್ಟಣದ ನೀರಾವರಿ ಕಾಲನಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಆನಂದ ಬನಪ್ಪನವರ ಅವರು 50 ಊಟದ ತಟ್ಟೆಗಳನ್ನು ನೀಡಿದರು.
ಶಾಲಾಭಿವೃದ್ಧಿ ಸಮಿತಿ ವತಿಯಿಂದ ಆನಂದ ಬನಪ್ಪನವರ ಅವರನ್ನು ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಲಿಂಗ ಅಸಮಾನತೆಯ ಕುರಿತು ಕಿರುಚಿತ್ರ ಪ್ರದರ್ಶಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಸಿ.ಕೆ. ಕೆಂಚನಗೌಡ್ರ, ಶಿಕ್ಷಕ ಜೆ.ಪಿ. ಪತಂಗೆ, ಎಸ್.ಬಿ. ಮಣ್ಣೂರ, ಎಸ್.ಎಸ್. ಚನ್ನಳ್ಳಿ, ಎಸ್.ವಿ. ಭೋಗಾರ, ಎಸ್.ವಿ. ದೋತರದ, ಬಿ.ಆರ್. ರಾಯನಗೌಡ್ರ, ಡಿ.ಬಿ. ಪಡೇಸೂರ, ಎಸ್.ಎಚ್. ತೊಂಡಿಹಾಳ, ಡಿ.ಎಚ್. ಜಕಾತಿ, ಎಸ್.ಬಿ. ಪಾಟೀಲ ಇತರರು ಉಪಸ್ಥಿತರಿದ್ದರು.