

ಕುಶಾಲನಗರ: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಪಟ್ಟಣದಲ್ಲಿರುವ ವಾತ್ಸಲ್ಯ ಶಿಶು ಪಾಲನ ಕೇಂದ್ರಕ್ಕೆ ಅಮೃತಭಾವನ ಮಹಿಳಾ ಸಂಘದ ವತಿಯಿಂದ ೯,೦೦೦ ಬೆಲೆಬಾಳುವ ವಾಟರ್ ಫಿಲ್ಟರನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಹಾಗೂ ಅಮೃತಭಾವನ ಮಹಿಳಾ ಸಂಘದ ಅಧ್ಯಕ್ಷೆ ಶಾಂತಿ, ಜಿಲ್ಲಾ ಮತ್ತು ರಾಜ್ಯಮಟ್ಟದ ಶ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ರೆಹನಾ, ತಾಲ್ಲೂಕು ಅಧ್ಯಕ್ಷೆ ಹೇಮಾ, ಶಿಶು ಪಾಲನ ಕೇಂದ್ರದ ಶಿಕ್ಷಕಿ ರಂಜಿತಾ, ಅಮೃತ ಭಾವನ ಮಹಿಳಾ ಸಂಘದ ಸದಸ್ಯರಾದ ಸುನೀತಾ, ಗೀತಾ, ಕವಿತಾ, ಆಶಾ, ರೂಪ, ಲಲಿತಮ್ಮ, ಶೋಭಾ, ಶಿವಮ್ಮ, ಶಾರದಮ್ಮ, ಸವಿತಾ, ಲಲಿತ, ಸೌಮ್ಯ, ಹರ್ಷಿತ, ಶಾಂತಿ, ಭವ್ಯ, ಗೀತಾ, ಶಿಲ್ಪ, ಮಮತಾ, ಕಾವೇರಿ, ಭಾನುಮತಿ ಸೇರಿದಂತೆ ಸಹಾಯಕಿಯರು ಪೋಷಕರು ಉಪಸ್ಥಿತರಿದ್ದರು.