ಕಾಲೇಜು ಜಮೀನು ಖಾಸಗಿಗೆ ಬೇಡ

Land slide at yana
Published on

ಭಾರತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕಿ ಸುಜಾತಾ ಆಗ್ರಹ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದ ೩.೭ ಎಕರೆ ಜಮೀನು ಕರ್ನಾಟಕ ಪ್ರದೇಶ ಕುರುಬ ಸಂಘಕ್ಕೆ ನೀಡಿದ್ದರಿಂದ ವಿದ್ಯಾರ್ಜನೆಗೆ ತೊಂದರೆಯಾಗಲಿದೆ ಎಂದು ಭಾರತ ವಿದ್ಯಾರ್ಥಿ ಒಕ್ಕೂಟ(ಎಸ್‌ಎಫ್‌ಐ)ದ ಜಿಲ್ಲಾ ಸಂಚಾಲಕಿ ಸುಜಾತಾ ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯ ಫಲಿತಾಂಶ, ಶೈಕ್ಷಣಿಕ ಗುಣಮಟ್ಟ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಪದವಿ, ಸ್ನಾತಕ ಸೇರಿ ಶಿಕ್ಷಣ ಕ್ಷೇತ್ರದ ವಿಸ್ತರಣೆಗೆ ಅವಕಾಶವಿರುವ ಸರ್ಕಾರಿ ಕಾಲೇಜು ಜಮೀನು ಖಾಸಗಿಯವರಿಗೆ ನೀಡಿದ್ದು ಸರಿಯಲ್ಲ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಕಾಲೇಜಿನಲ್ಲಿ ಸುಮಾರು ೩,೫೦೦ ವಿದ್ಯಾರ್ಥಿಗಳಿದ್ದು, ೫೪ ಕೋಣೆಗಳಿವೆ. ಸಮರ್ಪಕ ಗ್ರಂಥಾಲಯ, ಕ್ರೀಡಾಂಗಣ, ಪ್ರಯೋಗಾಲಯ, ಸಭಾಂಗಣ ಬೇಕಿದೆ. ಎಲ್ಲ ಮೂಲಸೌಕರ್ಯ ಒದಗಿಸಬೇಕಿದ್ದ ಸರ್ಕಾರವೇ ಖಾಸಗಿ ಸಂಸ್ಥೆಗೆ ಶಿಕ್ಷಣಕ್ಕೆ ಮೀಸಲಿದ್ದ ಜಮೀನು ನೀಡಿದ್ದು ಸಲ್ಲದು. ಸರ್ಕಾರ ತಕ್ಷಣ ತನ್ನ ನಿರ್ಧಾರ ವಾಪಸ್ ಪಡೆದು ಕಾಲೇಜು ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಳ್ಳಬೇಕು. ಇಲ್ಲವಾದರೆ ಹಂತ ಹಂತದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net