ನಿರಂತರ ಶಿಕ್ಷಣದಿಂದ ಸ್ಪರ್ಧಾತ್ಮಕ ನೈಪುಣ್ಯ: ಡಾ. ಟಿ.ಎನ್. ನಾಗಭೂಷಣ ಅಭಿಮತ

donbosco
Published on

ಬೆಂಗಳೂರು: ನಗರದ ಮೈಸೂರು ರಸ್ತೆಯ ಡಾನ್ ಬಾಸ್ಕೋ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಮೊದಲ ವರ್ಷದ ತರಗತಿಯ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಿತು.

ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಸ್. ನಾಗಭೂಷಣ, ಬಳ್ಳಾರಿಯ ಕಿಶ್ಕಿಂಧಾ ವಿವಿ ಕುಲಪತಿ ಡಾ. ಟಿ.ಎನ್. ನಾಗಭೂಷಣ, ಸ್ಯಾಮ್ಸಂಗ್ ಇನೋವೇಷನ್ ಕ್ಯಾಂಪಸ್‌ನ ನಿರ್ದೇಶಕ ನಂದೀಶ್ ಮಧು ಇತರರು ವಿದ್ಯಾರ್ಥಿಗಳಿಗೆ ಶುಭಕೋರಿದರು.

ಡಾ. ಟಿ.ಎನ್. ನಾಗಭೂಷಣ ಮಾತನಾಡಿ, ತಾಂತ್ರಿಕ ಶಿಕ್ಷಣದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಬೇಕು. ನಿರಂತರ ಶಿಕ್ಷಣದ ಮೂಲಕ ನಾವು ಸ್ಪರ್ಧಾತ್ಮಕತೆಯನ್ನು ಉಳಿಸಿಕೊಳ್ಳಬಹುದು ಮತ್ತು ಸುಂದರ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ನಂದೀಶ್ ಮಧು ಮಾತನಾಡಿ, ಹೇಗೆ ಮೊಬೈಲ್ ಸಾಧನಗಳನ್ನು ನಿಯಮಿತವಾಗಿ ಅಪಡೇಟ್ ಮಾಡುತ್ತೇವೋ ಹಾಗೆಯೇ ಶಿಕ್ಷಣದಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮುನ್ನಡೆ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಡಾ. ಬಿ.ಎಸ್. ನಾಗಭೂಷಣ ಮಾತನಾಡಿ, ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ನಾಲ್ಕು ವರ್ಷದ ಶಿಕ್ಷಣ ಹಾದಿ ಹೇಗಿರುತ್ತದೆ, ಅದನ್ನು ಯಾವ ರೀತಿ ಉತ್ತಮವಾಗಿ ರೂಪಿಸಿಕೊಳ್ಳಬೇಕು ಹಾಗೂ ಈ ಅವಧಿಯಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಪಠ್ಯಕ್ರಮ ಎರಡನ್ನು ಸಮಾನವಾಗಿ ಅಭ್ಯಸಿಸುವುದು ಎಷ್ಟು ಮುಖ್ಯ ಎಂಬುದರ ಬಗ್ಗೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net