ಚೆನ್ನಾವರದಲ್ಲಿ ದೊಂಪದ ಬಲಿ ನೇಮೋತ್ಸವ

New Project (11)
Published on: 

ಕಡಬ: ಪಾಲ್ತಾಡಿ ಗ್ರಾಮದ ಚೆನ್ನಾವರ ಪಟ್ಟೆ ಶಿರಾಡಿ ದೈವಸ್ಥಾನದಲ್ಲಿ ದೊಂಪದ ಬಲಿ ನೇಮೋತ್ಸವ ಬುಧವಾರ, ಗುರುವಾರ ನಡೆಯಿತು.

ಬುಧವಾರ ಚೆನ್ನಾವರಗಡಿಗುತ್ತು ಚಾವಡಿಯಿಂದ ಗ್ರಾಮದೈವ ಅಬ್ಬೆಜಲಾಯ ದೈವದ ಭಂಡಾರ ತೆಗೆದು ಪಟ್ಟೆ ದೈವಸ್ಥಾನಕ್ಕೆ ತರಲಾಯಿತು. ಬಳಿಕ ಶಿರಾಡಿ ದೈವಸ್ಥಾನದಲ್ಲಿ ದೈವದ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆಯಿತು. ಬಳಿಕ ಗ್ರಾಮದೈವ ಅಬ್ಬೆಜಲಾಯ, ಶಿರಾಡಿ ದೈವದ ದೊಂಪದ ಬಲಿ ನೇಮೋತ್ಸವ, ಪ್ರಸಾದ ವಿತರಣೆ ನಡೆಯಿತು. ಉಳ್ಳಾಕುಲು ಸೇವಾ ಸಮಿತಿ ಹಾಗೂ ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net