ಇಂದಿನಿಂದ ತೇರೆಜಾಲು ದೊಂಪದಬಲಿ

Published on

ಗುರುಪುರ: ಮಂಗಳೂರು ತಾಲೂಕಿನ ಕುಲವೂರು ಗ್ರಾಮದ ತೇರೆಜಾಲು ದೊಂಪದಬಲಿ ಸಮಿತಿ ನೇತೃತ್ವದಲ್ಲಿ ನಡೆಯುವ ತೇರೆಜಾಲು ದೊಂಪದಬಲಿ ಫೆ.28ರಿಂದ ಮಾರ್ಚ್ 2ರವರೆಗೆ ನಡೆಯಲಿದೆ. ಫೆ.28ರಂದು ಬೆಳಗ್ಗೆ 7.55ಕ್ಕೆ ಕೋಳಿಕುಂಟ, 10ರಿಂದ ಫಲ್ಗುಣಿ ನದಿ ತೀರದ ಪವಿತ್ರ ಅಶ್ವತ್ಥ ಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ, ರಾತ್ರಿ ವಾರಿಪೂಜೆ ನಡೆಯಲಿದೆ. ಮಾರ್ಚ್ 1ರಂದು ಬೆಳಗ್ಗೆ ಶ್ರೀ ಧೂವಾವತಿ ಮತ್ತು ಕನಲ್ಲಾಯ ದೈವಗಳ ಭಂಡಾರ ಏರುವುದು. ರಾತ್ರಿ 10ಕ್ಕೆ ಮಹಿಷಂದಾಯ ಮತ್ತು ಧೂವಾವತಿ ದೈವದ ನೇಮ, 2ರಂದು ಕುಲವೂರು ಶ್ರೀ ಧೂವಾವತಿ ಕನಲ್ಲಾಯ ಯೂತ್ ಕ್ಲಬ್‌ನ 13ನೇ ವರ್ಷಾಚರಣೆ ಪ್ರಯುಕ್ತ ಸಂಜೆ 6.30ರಿಂದ ಒರಿಯಾಂಡಲ ಸರಿ ಬೋಡು ಎಂಬ ತುಳು ನಾಟಕ ಪ್ರದರ್ಶನ, ರಾತ್ರಿ 11ರಿಂದ ಕನಲ್ಲಾಯ ದೈವದ ನೇಮ ಮತ್ತು ಕಲ್ಕುಡ ಕಾಳಮ್ಮ ದೈವಗಳ ಕೋಲ, ನಂತರ ಭಂಡಾರ ಇಳಿಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net