

ವಿಜಯಪುರ: ಎರಡನೇ ದಿನವಾದ ಭಾನುವಾರ ಸಹ ಬೆಳಗಾವಿಯ ವಿವಿಧ ಕಾಲೇಜ್‌ಗಳ ಕ್ರೀಡಾಪಟುಗಳು ತಮ್ಮ ಪ್ರಾಬಲ್ಯ ಮುಂದುವರಿಸಿದ್ದಾರೆ.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶನಿವಾರದಿಂದ ಆರಂಭಗೊಂಡಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8 ನೇ ಅಂತರ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ನಡೆದ ವಿವಿಧ ಕ್ರೀಡೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಭಾನುವಾರ ನಡೆದ ವಿವಿಧ ಕ್ರೀಡಾಸ್ಪರ್ಧೆಗಳ ವಿವರ:
ಪುರುಷರ ವಿಭಾಗದ ಫಲಿತಾಂಶ: 200 ಮೀ., ಓಟದಲ್ಲಿ ಬೆಳಗಾವಿಯ ಭರತೇಶ ಕಾಲೇಜ್ ಕ್ರೀಡಾಪಟು ಶ್ರೀಕಾಂತ ಕಾಂಬಳೆ, ಹಾರೂಗೇರಿಯ ಎಸ್ಟಿಎಂ ಕಾಲೇಜ್ ಕ್ರೀಡಾಪಟು ಮುತ್ತಪ್ಪ ಯಲ್ಲಪ್ಪ ಲಾಲಬೂದಿ, ಬೆಳಗಾವಿಯ ಕೆಎಲ್‌ಇ ಲಿಂಗರಾಜ ಕಾಲೇಜ್ ಕ್ರೀಡಾಪಟು ಸುನೀಲ. ಎಚ್ ಕ್ರಮವಾಗಿ ಸ್ಥಾನ ಪಡೆದರು.
5000 ಮೀ. ಓಟದಲ್ಲಿ ಹಾರೂಗೇರಿಯ ಎಸ್ಪಿಎಂ ಕಾಲೇಜ್ ಕ್ರೀಡಾಪಟು ಅಜಿತ್ ಪಾಟೀಲ, ಬೆಳಗಾವಿ ಲಿಂಗರಾಜ್ ಕಾಲೇಜ್ ಕ್ರೀಡಾಪಟು ವಿಜಯ ಎಸ್. ಹುಕ್ಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕ್ರೀಡಾಪಟು ಕಿರಣ ಕಾಮಟೆ ಕ್ರಮವಾಗಿ ಸ್ಥಾನ ಪಡೆದುಕೊಂಡರು.
ಜಾವಲಿನ್ ಥ್ರೋ ವಿಭಾಗದಲ್ಲಿ ವಿಜಯಪುರದ ಬಂಜಾರಾ ಕಾಲೇಜ್ ಕ್ರೀಡಾಪಟು ಶರತಕುಮಾರ ಜುಂಜರವಾಡ, ಅಥಣಿಯ ಎಸ್‌ಎಂಎಸ್ ಕಾಲೇಜ್ ಕ್ರೀಡಾಪಟು ಸಾಗರ ಮಂಗರಲ್ ಹಾಗೂ ವಿಜಯಪುರದ ಸರ್ಕಾರಿ ಕಾಲೇಜ್ ಕ್ರೀಡಾಪಟು ಅಶೋಕ ಜನೋಜಿ ಕ್ರಮವಾಗಿ ಸ್ಥಾನ ಪಡೆದರು.
ಮಹಿಳೆಯರ ವಿಭಾಗದ ಲಿತಾಂಶ: 100 ಮೀ, ಹರ್ಡಲ್ಸ್‌ನಲ್ಲಿ ಬೆಳಗಾವಿಯ ಗೋವಿಂದರಾಮ್ ಸಿಕ್ಸೆರಿಯಾ ಕಾಲೇಜ್ ಕ್ರೀಡಾಪಟು ಪಲ್ಲವಿ ರಾಜಾರಾಂ ಧಮ್ನೇಕರ್, ಬೆಳಗಾವಿಯ ಲಿಂಗರಾಜ್ ಕಾಲೇಜ್ ಕ್ರೀಡಾಪಟು ಗುಂಜನ್ ನೀಲಜೇಕರ್, ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕ್ರೀಡಾಪಟು ವೈಷ್ಣವಿ ಜಾಧವ ಕ್ರಮವಾಗಿ ಸ್ಥಾನಗಳನ್ನು ಪಡೆದುಕೊಂಡರು.
200 ಮೀ. ಓಟದ ಸ್ಪರ್ಧೆಯಲ್ಲಿ ಬೆಳಗಾವಿಯ ತಿಲಕವಾಡಿಯ ರಾಣಿಪಾರ್ವತಿ ಕಾಲೇಜ್ ಕ್ರೀಡಾಪಟು ಅನುಷ್ಕಾ ಶಂಕರಗೌಡ, ಬೆಳಗಾವಿ ಲಿಂಗರಾಜ್ ಕಾಲೇಜ್ ಕ್ರೀಡಾಪಟು ರಮಲ್, ಗಡ್ತರಿ, ಮರಡಿಮಠದ ಆದರ್ಶ ಗುರುಸಿದ್ಧೇಶ್ವರ ಕಾಲೇಜ್ ಕ್ರೀಡಾಪಟು ಲಕ್ಷ್ಮೀ ಬ್ಯಾಕೋಡ ಕ್ರಮವಾಗಿ ಸ್ಥಾನ ಪಡೆದುಕೊಂಡರು.
4/400 ಮೀ., ರಿಲೆಯಲ್ಲಿ ಬೆಳಗಾವಿಯ ಗೋವಿಂದರಾಮ್ ಸೆಕ್ಸರಿಯಾ ಕಾಲೇಜ್ ಕ್ರೀಡಾಪಟು ಸೌಭಾಗ್ಯನಿ ಕಾಕಟಕರ, ಬೆಳಗಾವಿ ಲಿಂಗರಾಜ್ ಕಾಲೇಜ್ ಕ್ರೀಡಾಪಟು ಗೀತಾಂಜಲಿ ಜಾಧವ, ಅಥಣಿ ತಾಲೂಕಿನ ಕೊಕಟನೂರ ಸರ್ಕಾರಿ ಕಾಲೇಜ್ ಕ್ರೀಡಾಪಟು ಕಾವೇರಿ ಪಾಟೀಲ ಕ್ರಮವಾಗಿ ಸ್ಥಾನ ಪಡೆದುಕೊಂಡಿದ್ದಾರೆ. 5000 ಮೀ., ಓಟದಲ್ಲಿ ಬೆಳಗಾವಿಯ ಟಿಳಕವಾಡಿ ರಾಣಿ ಪಾರ್ವತಿದೇವಿ ಕಾಲೇಜ್ ಕ್ರೀಡಾಪಟು ಟೀನಾ ಮಂಖಾನೆ, ಜಮಖಂಡಿಯ ಬಿಎಚ್‌ಎಸ್ ಕಾಲೇಜ್ ಕ್ರೀಡಾಪಟು ಭಯಾಶ್ರೀ ಹವಾಲ್ದಾರ್, ಚಿಕ್ಕೋಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕ್ರೀಡಾಪಟು ರಾಧಾ ಸಾಳುಂಕೆ ಕ್ರಮವಾಗಿ ಸ್ಥಾನ ಪಡೆದಿದ್ದಾರೆ. ಜಾವಲಿನ್ ಥ್ರೋ ದಲ್ಲಿ ಬೆಳಗಾವಿಯ ಸರ್ಕಾರಿ ಕಾರ್ಮಸ್ ಕಾಲೇಜ್ ಕ್ರೀಡಾಪಟು ಇಂದ್ರಾಯಾನಿ ಗಾವಡೋಜಿ, ಮುಧೋಳದ ಎಸ್.ಆರ್. ಕಂಠಿ ಕಾಲೇಜ್ ಕ್ರೀಡಾಪಟು ಮುಸ್ಕಾನ್ ಸುಬೇದಾರ, ಕುಡಚಿಯ ಶಂಕರಾನಂದ ಕಾಲೇಜ್ ಕ್ರೀಡಾಪಟು ಬಾನು ಫೀರಜಾದೆ ಕ್ರಮವಾಗಿ ಸ್ಥಾನ ಪಡೆದುಕೊಂಡರು.
ಮ್ಯಾರಾಥಾನ್‌ಗೆ ಚಾಲನೆ
ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶನಿವಾರದಿಂದ ಆರಂಭಗೊಂಡಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8 ನೇ ಅಂತರ್ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 21 ಕಿ.ಲೋ. ಮೀಟರ್‌ಗಳ ಹಾಫ್ ಮ್ಯಾರಾಥಾನ ಓಟ ಹಮ್ಮಿಕೊಳ್ಳಲಾಗಿತ್ತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮ್ಯಾರಾಥಾನಗೆ ಚಾಲನೆ ನೀಡಿದರು.
ಜಮಖಂಡಿಯ ಹುನ್ನೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ವಿದ್ಯಾರ್ಥಿ ಸಂಗಮೇಶ ಹಳ್ಳಿ ಪ್ರಥಮ ಸ್ಥಾನಗಳಿಸಿದರು. ಬೆಳಗಾವಿಯ ಭರತೇಶ ಕಾಲೇಜ್ ಆಫ ಕಾಮರ್ಸ್ ವಿದ್ಯಾರ್ಥಿ ನಿಲೇಶ ಪಾಟೀಲ ದ್ವಿತೀಯ ಸ್ಥಾನಗಳಿಸಿದರು.
ಉದ್ಯಮಿ ಸಂತೋಷ ತಳಕೇರಿ, ಪ್ರಾಂಶುಪಾಲ ಅಶೋಕ ಹೆಗಡೆ, ದೈಹಿಕ ಶಿಕ್ಷಣ ನಿರ್ದೇಶಕ ಅಶೋಕ ಕುಮಾರ ಜಾಧವ, ಎಫ್.ಎಚ್. ಕಲಾದಗಿ, ರವಿಕುಮಾರ, ಸುರೇಶ ಬಿಜಾಪುರ, ರಾಜು ಚವ್ಹಾಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡ್ರೋಣ ಕ್ಯಾಮರಾದಿಂದ ಸೆರೆ
ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ವ್ಯಾಪ್ತಿಯ 120ಕ್ಕೂ ಪದವಿ ಕಾಲೇಜ್‌ಗಳ 1500ಕ್ಕೂ ಅಧಿಕ ಕ್ರೀಡಾಪಟುಗಳು ಈ ಕೂಟದಲ್ಲಿ ಭಾಗವಹಿಸಿದ್ದಾರೆ. ವಿಶೇಷ ಎಂದರೆ ಕ್ರೀಡಾಕೂಟದ ಪ್ರತಿಯೊಂದು ಕ್ಷಣವನ್ನು ಡ್ರೋಣ ಕ್ಯಾಮರಾ ಮೂಲಕ ಸೆರೆ ಹಿಡಿಯಲಾಗುತ್ತಿದೆ.
ಭಾನುವಾರ ವಿಜೇತ ಕ್ರೀಡಾಪಟುಗಳಿಗೆ ಗಣ್ಯರು ಪ್ರಶಸ್ತಿ ಪತ್ರ, ಪದಕ ನೀಡಿ ಪ್ರೋತ್ಸಾಹಿಸಿದರು.
ಬಹುಮಾನ ವಿತಕರಾಗಿ ಲೋಕಾಯುಕ್ತ ಎಸ್.ಪಿ. ಅನಿತಾ ಹದ್ದನ್ನವರ, ಲಯನ್ಸ್ ಕ್ಲಬ್ ಪರಿವಾರದ ಅಧ್ಯಕ್ಷ ಸತ್ಯಕಾಮ ಕಟ್ಟಿ, ಉದ್ಯಮಿ ಜಾಕೀರ್ ಬಾಗವಾನ, ಮಾನಸ ಗಂಗೋತ್ರಿ ಸಂಸ್ಥೆಯ ಕಾರ್ಯದರ್ಶಿ ಕುಮಾರಗೌಡ ಹರನಾಳ, ರಾಕೇಶ ಕಲ್ಲೂರ್, ಪ್ರೋ. ಎಂ.ಬಿ.ರಜಪೂತ, ರಮ್ಯ ಮಸಿಬಿನಾಳ ವಿಜೇತರಿಗೆ ಬಹುಮಾನ ವಿತರಿಸಿದರು.