ಗೃಹಬಳಕೆ ಸಿಲಿಂಡರ್ ವಾಣಿಜ್ಯ ಉದ್ದೇಶಕ್ಕೆ ಬಳಕೆ : ಗ್ರಾಹಕ ದಕ್ಷತಾ ಕಲ್ಯಾಣ್ ಫೌಂಡೇಷನ್ ಕಳವಳ

Gas Cylinders
Published on

ಮೈಸೂರು: ವಾಣಿಜ್ಯ ಸಿಲಿಂಡರ್ ಬೆಲೆಗಳು ಶೇ.ನೂರರಷ್ಟು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗೃಹ ಬಳಕೆ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಹೆಚ್ಚುತ್ತಿದೆ. ಇದರಿಂದ ಸರ್ಕಾರಕ್ಕೆ ನಷ್ಟವಾಗುತ್ತಿರುವುದು ಮಾತ್ರವಲ್ಲದೆ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಗ್ರಾಹಕ ದಕ್ಷತಾ ಕಲ್ಯಾಣ್ ಫೌಂಡೇಷನ್ ರಾಜ್ಯದ ಮುಖ್ಯಸ್ಥ ಎಸ್. ಚೇತನ್ ಕುಮಾರ್ ಹೇಳಿದರು.

ನಮ್ಮ ಸಂಸ್ಥೆಯಿಂದ ಸಿಲಿಂಡರ್ ಬಳಕೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸಿಲಿಂಡರ್ ಪಡೆಯುವಾಗ ಗ್ರಾಹಕರು ಸೀಲ್ಅನ್ನು ಪರಿಶೀಲಿಸಬೇಕು. ಖಾಲಿ ಸಿಲಿಂಡರ್‌ಗಳು ಹಾಗೂ ಪೂರ್ಣ ಸಿಲಿಂಡರ್‌ಗಳ ತೂಕ ಪರಿಶೀಲನೆ ಮಾಡುವುದು ಗ್ರಾಹಕರ ಹಕ್ಕು. ಶಾಂಪು ಅಥವಾ ಸಾಬೂನು ನೀರನ್ನು ಸೇರಿಸುವ ಮೂಲಕ ಸಿಲಿಂಡರ್ ಸೋರಿಕೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆಟೋ ರಿಕ್ಷಾ, ಕಾರು ಮತ್ತಿತರ ವಾಹನಗಳಲ್ಲಿ, ವಾಣಿಜ್ಯ ಉದ್ದೇಶಕ್ಕೆ ಅಕ್ರಮವಾಗಿ ಗೃಹ ಬಳಕೆ ಸಿಲಿಂಡರ್ ಬಳಕೆ ಮಾಡುವುದು ಕಂಡು ಬಂದಲ್ಲಿ ಪೊಲೀಸರಿಗೆ ದೂರು ನೀಡಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಪ್ರಶಾಂತ್ ಜಾಮಗಡೆ, ಅರುಣ್ ಮಾನಗಾಂವೆ, ಮುತ್ತುರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net