ಡೊಳ್ಳು ಕಲಾ ಮೇಳ ಇಂದು

images
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂದ ಜಾನಪದ ಮಂಟಪವು ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಕಲಾ ಮತ್ತು ವಾಣಿಜ್ಯ ಕಾಲೇಜು ಸಹಯೋಗದಲ್ಲಿ ಮೇ 19ರಂದು ಸಂಜೆ 7 ಗಂಟೆಗೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕು ಹೊಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡೊಳ್ಳು ಕಲಾ ಮೇಳ ಆಯೋಜಿಸಿದೆ.
ಗಂಗೀಭಾವಿ ಯಲಿಗಾರ ಸೇವಾ ಸಂಸ್ಥೆ ಕಲಾ ಪೋಷಕ ಶಶಿಧರ ಯಲಿಗಾರ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಡಾ. ಬಿ.ವೈ. ತೊಂಡಿಹಾಳ, ಗುರು ಹಿರೇಮಠ ಹಾಗೂ ರಾಜು ಕೆಂಭಾವಿ ಆಗಮಿಸುವರು. ಹೊಸೂರ ಗ್ರಾಮದ ಹಿರಿಯರಾದ ನಾಗರಾಜ ಸೂರಗೊಂಡ ಅಧ್ಯತೆ ವಹಿಸುವರು.
ಗ್ರಾಮದ ಹಿರಿಯರಾದ ರಾಜೇಶ್ವರಿ ಲಮಾಣಿ, ಧರಣೇಂದ್ರ ಪುಟ್ಟಣ್ಣವರ, ಅಣ್ಣಪ್ಪ ಲಮಾಣಿ, ಚನ್ನವ್ವ ಪಾಟೀಲ, ಶಂಕರಗೌಡ ಪಾಟೀಲ, ಖಾಜಿಸಾಬ ಮುಲ್ಲಾನವರ, ಸುಧೀರ ಛಬ್ಬಿ, ಚನ್ನಪ್ಪ ಮಾದರ, ಮಲ್ಲಪ್ಪ ಲಮಾಣಿ, ತುಂಗವ್ವ ಬಿಶೆಟ್ಟಿ, ಭಾಗ್ಯಶ್ರೀ ಇಂದೂರ, ಶಜನಾ ನದಾ, ಗೌರವ್ವ ವಾಲ್ಮೀಕಿ, ಲಕ್ಷ$್ಮವ್ವ ಮಾದರ, ನಾಗರಾಜ ಇಂದೂರ ಉಪಸ್ಥಿತರಿರುವರು. ಧಾರವಾಡದ ಇಮಾಮಸಾಬ ವಲ್ಲೆಪ್ಪನವರ ಅವರಿಂದ ಡೊಳ್ಳಿನ ಹಾಡು, ಹೊಸೂರ ಯತ್ನಳ್ಳಿಯ ನಿಂಗಪ್ಪ ಸುಣಗಾರ ಅವರಿಂದ ಡೊಳ್ಳಿನ ಕೈ ಪೆಟ್ಟು ಹಾಗೂ ಹೊಸೂರಿನ ಗೂಳಪ್ಪ ಬಸಪ್ಪ ಬಾರಕೇರ ಅವರಿಂದ ಡೊಳ್ಳು ಕುಣಿತ ಪ್ರದರ್ಶನಗೊಳ್ಳಲಿವೆ ಎಂದು ಸಂದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net