ಮಳೆಗಾಗಿ ಗೊಂಬೆ ಮದುವೆ

doll wedding
Published on

ಲಕ್ಷ್ಮೇಶ್ವರ: ಹಲವು ಸಂಪ್ರದಾಯ, ಪದ್ಧತಿಗಳನ್ನು ಆಚರಿಸಿದರೂ ಮಳೆರಾಯ ಕೃಪೆ ತೋರುತ್ತಿಲ್ಲ. ಕಪ್ಪೆ ಮದುವೆ, ಕತ್ತೆ ಮೆರವಣಿಗೆ, ಗುರ್ಜಿಪೂಜೆ, ಪರವು, ಜಲಾಭಿಷೇಕ, ಶಿವನಾಮ ಸ್ತುತಿ ಮಾಡಿದರೂ ಪ್ರಯೋಜನವಾಗಿಲ್ಲ. ಆದರೂ ಆಚರಣೆಗಳನ್ನು ಮಾತ್ರ ರೈತರು ಬಿಟ್ಟಿಲ್ಲ.

ಪಟ್ಟಣದ ಮ್ಯಾಗೇರಿ ಓಣಿಯ ರೈತರು ಬೀರೇಶ್ವರ ದೇವಸ್ಥಾನದಲ್ಲಿ ಬುಧವಾರ ಗೊಂಬೆ ಮದುವೆ ನೆರವೇರಿಸಿದರು. ವಧು ಮತ್ತು ವರನ ಕಡೆಯ ಬೀಗರು ಸೇರಿ ದೇವಸ್ಥಾನವನ್ನು ಅಲಂಕರಿಸಿದ್ದರು. ಮದುವೆಯೇ ರೀತಿಯಲ್ಲಿಯೇ ಹಾಲಗಂಬವನ್ನು ವಾದ್ಯ ಸಮೇತ ತಂದು ನಿಲ್ಲಿಸಿದರು.

ಪರಸ್ಪರರು ಕಂಕಣ ಕಟ್ಟಿಕೊಂಡರು. ಗೊಂಬೆಗಳಿಗೆ ಅರಿಷಿಣ ಲೇಪನ ಕಾರ್ಯ ಮಾಡಿ ಸುರಗಿ ಎರೆದು ಹೊಸ ಬಟ್ಟೆಗಳನ್ನು ಹಾಕಿ ಸಿಂಗರಿಸಿದ್ದರು. ಅಕ್ಷತಾರೋಪಣ ಸಮಯ ಗಟ್ಟಿಮೇಳ ವಾದ್ಯಗಳೊಂದಿಗೆ ತಾಳಿಕಟ್ಟುವ ಸಂಪ್ರದಾಯ ಆಚರಿಸಿದರು. ಬಳಿಕ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ಜಯವ್ವ ಪೂಜಾರ, ಬಸವ್ವ ಪಾಟೀಲ, ಪಾರವ್ವ ಪೂಜಾರ, ಸಾವಕ್ಕ ಪೂಜಾರ, ಶಾರವ್ವ ಗೋಜಗೊಜಿ, ತಿರಕವ್ವ ಬನ್ನಿ, ನೀಲವ್ವ ಪೂಜಾರ, ಲಕ್ಷ್ಮವ್ವ ಮುಳಗುಂದ, ಗಂಗಪ್ಪ ದುರಗಣ್ಣವರ, ಯಲ್ಲಪ್ಪ ಪೂಜಾರ, ಪುಟ್ಟವ್ವ ಛಬ್ಬಿ, ನಾಗರಾಜ ಕೋರಿ, ದೇವಪ್ಪ ಪೂಜಾರ, ಮಾತಾರ್ಂಡ ಬನ್ನಿ, ಬಸಪ್ಪ ಗುಡಗುಂಟಿ, ಪರಮೇಶ ಮುಳಗುಂದ, ಬೀರಪ್ಪ ಪೂಜಾರ, ಬಸಪ್ಪ ನೀಲಪ್ಪನವರ, ಸಿಂದೋಗೆಪ್ಪ ದುರಗಣ್ಣವರ, ಮಂಜುನಾಥ ಪೂಜಾರ, ಹನಮಂತಪ್ಪ ಬನ್ನಿ, ಹನಮಂತಪ್ಪ ಉಳ್ಳಟ್ಟಿ ಇತರರಿದ್ದರು.

ಗೊಂಬೆ ಮದುವೆ ನಂತರ ಬುಧವಾರ ಸಂಜೆ ಮತ್ತು ಗುರುವಾರ ಪಟ್ಟಣ ಸೇರಿ ಅಲ್ಲಲ್ಲಿ ಸಾಧಾರಣ ಮಳೆಯಾಗಿರುವುದು ರೈತರ ನಂಬಿಕೆಗೆ ಇಂಬು ನೀಡಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net