ಚಿಮ್ಮಡದಲ್ಲಿ ಡೋಲಿ ಮೆರವಣಿಗೆ

Doli procession in Chimmada
ಚಿಮ್ಮಡದಲ್ಲಿ ಮೊಹರಂ ನಿಮಿತ್ತ ಲಾಲಸಾಬಲಿ, ಹುಸೇನಬಾಷಾ ದೇವರ ಮೆರವಣಿಗೆ ಮೂಲಕ ಗ್ರಾಮದ ಪ್ರಭುಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಭೇಟಿ ಮಾಡಲಾಯಿತು.
Published on

ಚಿಮ್ಮಡ: ಗ್ರಾಮದಲ್ಲಿ ಲೇಝಿಮ್ ಉತ್ಸವ ಡೋಲಿ ಮೆರವಣಿಗೆಯೊಂದಿಗೆ ಆಚರಿಸಲಾಯಿತು.

ಕಳೆದ ಐದು ದಿನಗಳಿಂದ ಗ್ರಾಮದ ಜಾಮಿಯಾ ಮಸೀದಿ ಹಾಗೂ ಗ್ರಾಮ ಚಾವಡಿ ಪಕ್ಕದ ಅಂಚೆ ಕಚೇರಿಯಲ್ಲಿ ಲಾಲಸಾಬಲಿ ಹಾಗೂ ಹುಸೇನಬಾಷ ದೇವರುಗಳಿಗೆ ಪ್ರತಿನಿತ್ಯ ವಿಶೇಷ ಪೂಜೆ ನೆರವೇರಿಸಲಾಯಿತು.

ಹಬ್ಬದ ಕೊನೆಯ ದಿನವಾದ ಭಾನುವಾರ ದೇವರನ್ನು ವಿಸರ್ಜಿಸಲು ಹೊಳೆಗೆ ಒಯ್ಯುವ ಮುಂಚೆ ನಡೆಯುವ ಡೋಲಿ ಉತ್ಸವದಲ್ಲಿ ದೇವರುಗಳಿಗೆ ಬೆತ್ತಾಸು, ಖಾರಿಕ, ಬಿಸ್ಕತ್‌ಗಳನ್ನು ಎಸೆಯುವ ಮೂಲಕ ಭಕ್ತರು ಹರಕೆ ತೀರಿಸಿದರು.

ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಅಣ್ಣಪ್ಪಗೌಡ ಪಾಟೀಲ, ಆರ್.ಎಂ. ಬಗನಾಳ, ಬಿ.ಎಸ್. ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net