ಸಮಾಜಸೇವೆ ಮಾಡುವುದು ಸುಲಭದ ಕೆಲಸವಲ್ಲ

kon (1)
Published on

ಕೊಕ್ಕರ್ಣೆ: ಇಂದಿನ ದಿನಗಳಲ್ಲಿ ಸವಾಜಸೇವೆ ವಾಡುವ ವ್ಯಕ್ತಿಗಳಿಗೆ ಸಹಕಾರ ನೀಡುವ ಬದಲಾಗಿ ಅಂತವರ ತೇಜೋವಧೆ ವಾಡುವಂತಹ ದುಸ್ಥಿತಿಗೆ ಸವಾಜ ಬಂದು ನಿಂತಿದೆ. ಸವಾಜ ಸೇವೆ ವಾಡುವುದು ಸುಲಭದ ಕೆಲಸ ಅಲ್ಲ ಎಂದು ತಾಲೂಕು ಭಜನಾ ಪರಿಷತ್‌ನ ಗೌರವ ಸಲಹೆಗಾರ ಕೊಕ್ಕರ್ಣೆ ಹರೀಶ್ ಶ್ಯಾನಭಾಗ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬ್ರಹ್ಮಾವರ ತಾಲೂಕು ಭಜನಾ ಪರಿಷತ್ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಭಜನಾ ಕಮ್ಮಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಪ್ರಸನ್ನ ಕುವಾರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆ.14ರಿಂದ 21ರ ವರೆಗೆ ಭಜನಾ ಕಮ್ಮಟ ನಡೆಯಲಿದೆ ಎಂದು ಭಜನಾ ಕಮ್ಮಟದ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುವಾರ್ ವಾಹಿತಿ ನೀಡಿದರು.

ತಾಲೂಕು ಯೋಜನಾಧಿಕಾರಿ ರಮೇಶ್ ಪಿ.ಕೆ., ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷ ರಾವೇಂದ್ರ, ಜತೆ ಕಾರ್ಯದರ್ಶಿ ಶಶಿಕಲಾ, ಕೋಶಾಧಿಕಾರಿ ಚಂದ್ರಶೇಖರ, ತಾಲೂಕು ಮೇಲ್ವಿಚಾರಕರು, ಭಜಕರು ಉಪಸ್ಥಿತರಿದ್ದರು. ಮೇಲ್ವಿಚಾರಕ ಗಣೇಶ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net